

South Movies: ಪ್ರತಿ ವಾರ ಚಿತ್ರಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿದ್ಧವಾಗಿರುತ್ತದೆ. ಭಾರತೀಯ ಚಲನಚಿತ್ರೋದ್ಯಮದ ಹಲವು ಬಹುನಿರೀಕ್ಷಿತ ಚಿತ್ರಗಳು ವಾರ ಕಳೆದಂತೆ ಮತ್ತೊಂದು ವಾರಕ್ಕೆ ಕಾಲಿಡುವ ಮೂಲಕ ಪ್ರೇಕ್ಷಕರ ಎದುರಿಗೆ ಹಾಜರಾಗುತ್ತವೆ. ಈ ಮೂಲಕ ಜನರಿಂದ ಉತ್ತಮ ಹಾಗೂ ಕಳಪೆ ವಿಮರ್ಶೆಗಳನ್ನು ಪಡೆಯುತ್ತವೆ. ಕೆಲವು ಸೂಪರ್ಹಿಟ್ ಆಗಿ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದರೆ, ಇನ್ನೂ ಕೆಲವು ಕೇವಲ ಕಥಾಹಂದರದಿಂದಲೇ ಗಮನ ಸೆಳೆದು, ಒಟಿಟಿಯಲ್ಲಿ ಭರ್ಜರಿ ಸದ್ದು ಮಾಡುತ್ತವೆ.
ಪ್ರತಿ ವಾರದಂತೆ ಈ ವಾರವು ಹಲವಾರು ಸಿನಿಮಾಗಳು ತೆರೆಕಂಡಿದ್ದು, ಅದರಲ್ಲಿ ದಕ್ಷಿಣ ಭಾರತದ ಚಿತ್ರಗಳು ಸಖತ್ ಸದ್ದು ಮಾಡಿವೆ. ಬರೋಬ್ಬರಿ 11 ಸೌತ್ ಸಿನಿಮಾಗಳು ರಿಲೀಸ್ ಆಗಿವೆ. ಇದರಲ್ಲಿ ಎರಡು ಕನ್ನಡ ಚಿತ್ರರಂಗದ ಚಿತ್ರಗಳು ತೆರೆಕಂಡರೆ, ಮಲಯಾಳಂ, ತಮಿಳು ಮತ್ತು ತೆಲುಗು ಫಿಲಂಗಳು ಪೈಪೋಟಿಗಿಳಿದಿವೆ. ಅಷ್ಟಕ್ಕೂ ಯಾವೆಲ್ಲ ಸಿನಿಮಾಗಳು ಈ ವಾರ ಬಿಡುಗಡೆಗೊಂಡಿವೆ? ಎಂಬುದರ ಮಾಹಿತಿ ಹೀಗಿದೆ ಗಮನಿಸಿ.
1. ಎಕ್ಕ (ಕನ್ನಡ)
ತಾರಾಗಣ: ಯುವ ರಾಜ್‌ಕುಮಾರ್, ಸಂಪದಾ, ಸಂಜನಾ ಆನಂದ್, ಅತುಲ್ ಕುಲಕರ್ಣಿ, ಎಂ.ಆರ್. ಆದಿತ್ಯ, ರಾಹುಲ್ ದೇವ್ ಶೆಟ್ಟಿ
ನಿರ್ದೇಶಕ: ರೋಹಿತ್ ಪದಕಿ
ಜಾನರ್: ಕ್ರೈಂ, ಡ್ರಾಮಾ
ರಿಲೀಸ್: ಜುಲೈ 18
2. ಜೂನಿಯರ್ (ತೆಲುಗು/ಕನ್ನಡ)
ತಾರಾಗಣ: ಕಿರೀಟಿ, ಶ್ರೀಲೀಲಾ, ವಿ. ರವಿಚಂದ್ರನ್, ಜೆನಿಲಿಯಾ ದೇಶಮುಖ್
ನಿರ್ದೇಶಕ: ಎಂ.ಆರ್. ರಾಧಾಕೃಷ್ಣ
ಜಾನರ್: ಫ್ಯಾಮಿಲಿ, ಆ್ಯಕ್ಷನ್-ಡ್ರಾಮಾ
ರಿಲೀಸ್: ಜುಲೈ 18
3. ಜಾನಕಿ ವಿ v/s ಸ್ಟೇಟ್ ಆರ್ಫ್ ಕೇರಳ (ಮಲಯಾಳಂ)
ತಾರಾಗಣ: ಸುರೇಶ್ ಗೋಪಿ, ಅನುಪಮಾ ಪರಮೇಶ್ವರನ್, ಮಾಧವ್ ಸುರೇಶ್, ಶ್ರುತಿ ರಾಮಚಂದ್ರನ್, ದಿವ್ಯಾ ಪಿಳ್ಳೈ, ಅಸ್ಕರ್ ಅಲಿ, ಬೈಜು ಸಂತೋಷ್
ನಿರ್ದೇಶಕ: ಪ್ರವೀಣ್ ನಾರಾಯಣನ್
ಜಾನರ್: ಕಾನೂನು, ಡ್ರಾಮಾ
ರಿಲೀಸ್: ಜುಲೈ 17
4. ಅಪೂರ್ವ ಪುತ್ರನ್ಮಾರ್ (ಮಲಯಾಳಂ)
ತಾರಾಗಣ: ವಿಷ್ಣು ಉನ್ನಿಕೃಷ್ಣನ್, ಬಿಬಿನ್ ಜಾರ್ಜ್, ಲಾಲು ಅಲೆಕ್ಸ್, ಅಶೋಕನ್, ಧರ್ಮಜನ್ ಬೋಲ್ಗಟ್ಟಿ
ನಿರ್ದೇಶಕರು: ರೆಂಜಿತ್ ಆರ್.ಎಲ್
ಜಾನರ್: ಕಾಮಿಡಿ, ಥ್ರಿಲ್ಲರ್
ರಿಲೀಸ್: ಜುಲೈ 18
5. ಕೊತ್ತಪಲ್ಲಿಲೊ ಒಕಪ್ಪುಡು (ತೆಲುಗು)
ತಾರಾಗಣ: ಮನೋಜ್ ಚಂದ್ರ, ರವೀಂದ್ರ ವಿಜಯ್, ಮೋನಿಕಾ ಟಿ, ಉಷಾ ಬೋನೇಲಾ
ನಿರ್ದೇಶಕರು: ಪ್ರವೀಣ ಪರುಚೂರಿ
ಜಾನರ್: ಹಾಸ್ಯ, ಡ್ರಾಮಾ
ರಿಲೀಸ್: ಜುಲೈ 18
6. ಗೆವಿ (ತಮಿಳು)
ತಾರಾಗಣ: ಶೀಲಾ ರಾಜ್‌ಕುಮಾರ್, ಜಾಕ್ಲಿನ್ ಲಿಡಿಯಾ, ಆಧವನ್ ಎಂ, ಚಾರ್ಲ್ಸ್ ವಿನೋತ್, ಜೀವಾ ಸುಬ್ರಮಣ್ಯಂ
ನಿರ್ದೇಶಕರು: ತಮಿಳು ಧಯಾಲನ್
ಜಾನರ್: ಆ್ಯಕ್ಷನ್, ಡ್ರಾಮಾ
ರಿಲೀಸ್: ಜುಲೈ 18
7. ಬನ್ ಬಟರ್ ಜಾಮ್ (ತಮಿಳು)
ತಾರಾಗಣ: ರಾಜು ಜಯಮೋಹನ್, ಆದಿಯಾ ಪ್ರಸಾದ್, ಭವ್ಯ ತ್ರಿಖಾ, ಶರಣ್ಯ ಪೊನ್ವಣ್ಣನ್, ದೇವದರ್ಶಿನಿ, ಚಾರ್ಲಿ
ನಿರ್ದೇಶಕ: ರಾಘವ್ ಮಿರ್ದತ್
ಜಾನರ್: ರೊಮ್ಯಾನ್ಸ್, ಹಾಸ್ಯ
ರಿಲೀಸ್: ಜುಲೈ 18
8. ಪೊಲೀಸ್ ವಾರಿ ಎಚ್ಚರಿಕಾ (ತೆಲುಗು)
ತಾರಾಗಣ: ಸನ್ನಿ ಅಖಿಲ್, ಶುಭಲೇಖಾ ಸುಧಾಕರ್, ಅಜಯ್ ಘೋಷ್, ಜಯ ವಾಹಿನಿ, ಹಿಮಾಜಾ ಮಲ್ಲಿರೆಡ್ಡಿ
ನಿರ್ದೇಶಕರು: ಕೆವಿ ಬಾಬ್ಜಿ
ಜಾನರ್: ಡ್ರಾಮಾ
ರಿಲೀಸ್: ಜುಲೈ 18
9. ಜೆನ್ಮ ನಚ್ಚತಿರಂ (ತಮಿಳು)
ತಾರಾಗಣ: ಕಾಳಿ ವೆಂಕಟ್, ಸಂತಾನ ಭಾರತಿ, ಮುನಿಷ್ಕಾಂತ್, ಮಾಳವಿ ಮಲ್ಹೋತ್ರಾ
ನಿರ್ದೇಶಕರು: ಬಿ ಮಣಿವರ್ಮನ್
ಜಾನರ್: ಹಾರರ್, ಡ್ರಾಮಾ
ರಿಲೀಸ್: ಜುಲೈ 18
10. ಫ್ಲಾಸ್ಕ್ (ಮಲಯಾಳಂ)
ತಾರಾಗಣ: ಸೈಜು ಕುರುಪ್, ಸುರೇಶ್ ಕೃಷ್ಣ, ಸಿದ್ಧಾರ್ಥ್ ಭರತನ್, ಅಶ್ವತಿ ಶ್ರೀಕಾಂತ್
ನಿರ್ದೇಶಕರು: ರಾಹುಲ್ ರಿಜಿ ನಾಯರ್
ಜಾನರ್: ಹಾಸ್ಯ, ಡ್ರಾಮಾ, ಥ್ರಿಲ್ಲರ್
ರಿಲೀಸ್: ಜುಲೈ 18
11. ರವೀಂದ್ರ ನೀ ಇವಿಡೆ (ಮಲಯಾಳಂ)
ತಾರಾಗಣ: ಅನೂಪ್ ಮೆನನ್, ಧ್ಯಾನ್ ಶ್ರೀನಿವಾಸನ್, ಸಿದ್ದಿಕ್, ಶೀಲು ಅಬ್ರಹಾಂ, ಅಜೀಜ್ ನೆಡುಮಂಗಡ
ನಿರ್ದೇಶಕರು: ಮನೋಜ್ ಪಲೋಡನ್
ಜಾನರ್: ಕಾಮಿಡಿ, ಥ್ರಿಲ್ಲರ್
ರಿಲೀಸ್: ಜುಲೈ 18