

ಆಸ್ಟ್ರೇಲಿಯಾ: ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನದ ಪ್ರಕಾರ ವಿಟಮಿನ್ ಡಿ ಕೊರತೆಯಿಂದಾಗಿ ಅಕಾಲಿಕ ಮರಣ ಆಗಬಹುದು. ಸೂರ್ಯನ ಬೆಳಕು ವಿಟಮಿನ್ ಡಿಯನನು ಶರೀರದಲ್ಲಿ ಉತ್ಪಾದಿಸುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಿಸಿಲೇ ಹೆಚ್ಚಿರುವ ಆಸ್ಟ್ರೇಲಿಯಾದಲ್ಲಿ ಇಂದಿಗೂ ಮೂವರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯನ್ನು ಎದುರಿಸುತ್ತಿದ್ದಾರೆ. ಈಗ ವಿಶ್ವವಿದ್ಯಾನಿಲಯ ಶರೀರದಲ್ಲಿ ವಿಟಮಿನ್ ಡಿ ಯ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳು ಜನರಿಗೆ ಕರೆ ನೀಡಿದೆ.
ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನಾ ಬರಹ ವಿಟಮಿನ್ ಡಿ ಕೊರತೆ ಹೆಚ್ಚಾದರೆ ಅಕಾಲಿಕ ಮರಣದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಸೂಚಿಸಿದೆ.
ವಿಟಮಿನ್ ಡಿ ಶರೀರಕ್ಕೆ ಅತ್ಯಗತ್ಯ ಪೋಷಕಾಂಶವಾಗಿದ್ದು ನಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.
ಈ ಅಧ್ಯಯನ ಕಡಿಮೆ ಮಟ್ಟದ ವಿಟಮಿನ್ ಡಿ ಮತ್ತು ಮರಣದ ನಡುವಿನ ಸಂಬಂಧಕ್ಕೆ ಬಲವಾದ ಪುರಾವೆಗಳನ್ನು ನೀಡಿದೆ. ಸಂಶೋಧನೆಯಲ್ಲಿ ಹೊಸ ರೀತಿಯ ಅನುವಂಶಿಕ ಮ್ಯಾಪಿಂಗ್ ತಂತ್ರವನ್ನು ಬಳಸಿದ್ದು ಇದರಿಂದ ವಿಟಮಿನ್ ಡಿ ಮತ್ತು ಅಕಾಲಿಕ ಸಾವಿನ ನಡುವೆ ಇರುವ ಸಂಬಂಧವನ್ನು ತೋರಿಸಲಾಗಿದೆ. (ಏಜೆನ್ಸೀಸ್)