More

    ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಸೋತ ಭಾರತ

    ಸೆಂಚುರಿಯನ್: ಇಲ್ಲಿನ ಸೂಪರ್​ಸ್ಪೋರ್ಟ್​ ಪಾರ್ಕ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಭಾರತ ತಂಡ ಇನ್ನಿಂಗ್ಸ್‌ ಹಾಗೂ 32 ರನ್‌ಗಳಿಂದ ಸೋಲುಂಡಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 245 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಡೀನ್​ ಎಲ್ಕರ್​ (185 ರನ್, 287 ಎಸೆತ, 28 ಬೌಂಡರಿ) ಶತಕದ ಬಲದೊಂದಿಗೆ 408 ರನ್ ಗಳಿಸುವ ಮೂಲಕ 163 ರನ್‌ಗಳ ಮುನ್ನಡೆ ಪಡೆದಿತ್ತು. ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 131 ರನ್‌ಗಳಿಗೆ ಆಲೌಟ್ ಆಗಿದೆ.

    ಭಾರತದ ಪರ ವಿರಾಟ್​ ಕೊಹ್ಲಿ (76 ರನ್, 82 ಎಸೆತ, 12 ಬೌಂಡರಿ, 1 ಸಿಕ್ಸರ್) ಬಿಟ್ಟರೆ ಉಳಿದ ಯಾವ ಬ್ಯಾಟ್ಸ್​ಮನ್​ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲದ ಕಾರಣ ಅಂತಿಮವಾಗಿ ಟೀಂ ಇಂಡಿಯಾ ಇನ್ನಿಂಗ್ಸ್‌ ಹಾಗೂ 32 ರನ್‌ಗಳ ಸೋಲೊಪ್ಪಿಕೊಂಡಿತ್ತು. ದಕ್ಷಿಣ ಆಫ್ರಿಕಾ ಪರ ನ್ಯಾಂಡ್ರೆ ಬರ್ಗರ್ (10-3-33-4), ಮಾರ್ಕೊ ಜಾನ್ಸೆನ್ (7.1-1-36-3), ಕಗಿಸೋ ರಬಾಡ (12-3-32-2) ಭಾರತದ ಬ್ಯಾಟ್ಸ್​ಮನ್​ಗಳನ್ನು ಇನ್ನಿಲ್ಲದಂತೆ ಕಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts