

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಉದ್ಯಮಿ ವಿಶಾಗನ್ ಅವರನ್ನು ಸೌಂದರ್ಯ ವರಿಸಿದ್ದು, ಇದೀಗ ಈ ದಂಪತಿಗೆ ಎರಡನೇ ಮಗುವಾಗಿದೆ. ವೀರ ರಜನಿಕಾಂತ್ ವನಂಗಮುಡಿ ಎಂದು ಹೆಸರಿಟ್ಟಿದ್ದಾರೆ. ಇವರಿಗೆ ಈಗಾಗಲೇ ವೇದ ಕೃಷ್ಣ ಎಂಬ ಗಂಡು ಮಗುವಿದೆ.
ಎರಡನೇ ಬಾರಿಗೆ ತಾಯಿಯಾಗಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದಾಗಿನ ಫೋಟೋ ಶೇರ್ ಮಾಡಿ, ದೇವರ ಅನುಗ್ರಹ ಮತ್ತು ಹೆತ್ತವರ ಆಶೀರ್ವಾದದೊಂದಿಗೆ ವೀರ ರಜನಿಕಾಂತ್ನನ್ನು ಸ್ವಾಗತಿಸಲು ನಾವು ಪುಳಕಿತರಾಗಿದ್ದೇವೆ ಎಂದು ಸೌಂದರ್ಯ ಬರೆದುಕೊಂಡಿದ್ದಾರೆ. ಡಾ. ಸುಮನಾ ಮನೋಹರ್, ಡಾ. ಶ್ರೀವಿದ್ಯಾ ಶೇಷಾದ್ರಿ ಹಾಗೂ ಶೇಷಾದ್ರಿ ಸುರೇಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸೌಂದರ್ಯ ರಜನಿಕಾಂತ್ 2017ರಲ್ಲಿ ಅಶ್ವಿನ್ ರಾಮ್ಕುಮಾರ್ ಅವರಿಂದ ಮನೆಯವರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ನಂತರ 2019ರಲ್ಲಿ ನಟ, ಉದ್ಯಮಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾಗಿದ್ದರು. (ಏಜೆನ್ಸೀಸ್)