

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಮಹಿಳೆಯೊಬ್ಬರಿಗೆ ಸೌದಿ ಅರೇಬಿಯಾದ ಕೋರ್ಟ್ 45 ವರ್ಷ ಸೆರೆವಾಸದ ತೀರ್ಪು ಪ್ರಕಟಿಸಿದೆ.
"ಸೌದಿಯ ಸಾಮಾಜಿಕ ಬಂಧವನ್ನು ಹರಿಯಲು ಇಂಟರ್ನೆಟ್ ಬಳಸಿದ್ದಕ್ಕಾಗಿ' ಸೌದಿ ವಿಶೇಷ ಕ್ರಿಮಿನಲ್ ಕೋರ್ಟ್ ನೌರಾ ಬಿನ್ ಸಯೀದ್ ಅಲ್-ಖಹ್ತಾನಿಗೆ ಈ ಶಿಕ್ಷೆ ವಿಧಿಸಿದೆ ಎಂದು ವಾಷಿಂಗ್ಟನ್ ಮೂಲದ "ಡಾನ್' ಸಂಸ್ಥೆ ಹೇಳಿದೆ. ಮಹಿಳೆ ಹಾಕಿದ ಪೋಸ್ಟ್ಗಳೇನು ಎನ್ನುವುದನ್ನು ಅದು ತಿಳಿಸಿಲ್ಲ.ಮಹಿಳಾ ಕಾರ್ಯಕರ್ತರ ಮೇಲಿನ ದಬ್ಬಾಳಿಕೆಗೆ ಇದು ತಾಜಾ ನಿದರ್ಶನವಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.