More

    “ನನಗೆ ಆಕ್ಸಿಡೆಂಟ್​ ಆಗಿಲ್ಲ..ನನಗೇನೂ ಆಗಿಲ್ಲ, ಐ ಆಮ್ ಫೈನ್” ವಿಡಿಯೋ ಹಂಚಿಕೊಂಡ ಸೋನು ಗೌಡ

    ಬೆಂಗಳೂರು: ಬಿಗ್ ಬಾಸ್ ಒಟಿಟಿ​ ಮಾಜಿ ಸ್ಪರ್ಧಿ, ಟಿಕ್​ಟಾಕ್​ ರೀಲ್ಸ್​​ ಸ್ಟಾರ್​​ ಸೋನು ಗೌಡ ಇದ್ದ  ಕಾರು ಅಪಘಾತಕ್ಕಿಡಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹಾಗೂ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದ್ದವು.  ಈ ಕುರಿತಾಗಿ ಸೋನು ಇನ್​ಸ್ಟಾಗ್ರಾಮ್​​ ಮೂಲಕವಾಗಿ ಸ್ಪಷ್ಟನೆ ನೀಡಿದ್ದಾರೆ.

    ಪಾರ್ಕಿಂಗ್‌ನಿಂದ ಕಾರು ತೆಗೆಯುವಾಗ ಅಪಾರ್ಟ್‌ಮೆಂಟ್‌ನ ಪಿಲ್ಲರ್‌ಗೆ ಡಿಕ್ಕಿ ಹೊಡೆದು ವಾಹನ ನಜ್ಜುಗುಜ್ಜಾಗಿದೆ.  ಕಾರ್ ಡ್ರೈವಿಂಗ್ ಕಲಿಯೋಕ್ ಹೋಗಿ ಸೋನು ಗೌಡ ಎಡವಟ್ಟು ಮಾಡಿಕೊಂಡಿದ್ದಾರೆ. ಬ್ರೇಕ್ ಅಂತ ಎಕ್ಸಿಲೇಟ‌ರ್ ತುಳಿದಿರುವುದರಿಂದ ಬಿಲ್ಡಿಂಗ್ ಪಿಲ್ಲರ್ ಗೆ ಕಾರ್ ಗುದ್ದಿದೆ. ಪಾರ್ಕಿಂಗ್ ಏರಿಯಾದ ಪಿಲ್ಲರ್ ಗೆ ಗುದ್ದಿರುವುದರಿಂದ ಬಲೆನೋ ಕಾರ್​ನ ಮುಂಬಾಗ ಸಂಪೂರ್ಣ ನುಜ್ಜು ಗುಜ್ಜು ಆಗಿದೆ. ಸದ್ಯ ಸೋನು ಕೈ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿತ್ತು. ಸದ್ಯ ನಗರದ ಗೊಲ್ಲರ ಪಾಳ್ಯ ಹೊಸಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಕೆಎ 43 ಎನ್‌ 4757 ನಂಬರ್‌ನ ಶಿಫ್ಟ್ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಜೊತೆಗೆ ಕಾರು ಡಿಕ್ಕಿ ಹೊಡೆದ ಪಿಲ್ಲರ್ ಸಹ ಹಾನಿಯಾಗಿದೆ ಎಂದು ಸುದ್ದಿ ಹಬ್ಬಿತ್ತು.

    "ನನಗೆ ಆಕ್ಸಿಡೆಂಟ್​ ಆಗಿಲ್ಲ..ನನಗೇನೂ ಆಗಿಲ್ಲ, ಐ ಆಮ್ ಫೈನ್" ವಿಡಿಯೋ ಹಂಚಿಕೊಂಡ ಸೋನು ಗೌಡ

    ಸೋನು ಹೇಳಿದ್ದೇನು?: ನನಗೆ ಆಕ್ಸಿಡೆಂಟ್​ ಆಗಿದೆ, ಸೋನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಹಬ್ಬಿತ್ತು. ಆದರೆ ನನಗೆ ಏನು ಆಗಿಲ್ಲ. ಐ ಆಮ್​ ಫೈನ್​​.. ನೋಡಿ ಈಗ ಎದ್ದು ಜಿಮ್​ಗೆ ಹೊರಟಿದ್ದೇನೆ ಎಂದು ಹೇಳಿದ್ದಾರೆ.

    ಟಿಕ್‌ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು.

    ಬ್ರೇಕ್ ಅಂತ ಎಕ್ಸಿಲೇಟ‌ರ್ ತುಳಿದ ಸೋನು ಗೌಡ; ಕಾರು ನುಜ್ಜುಗುಜ್ಜು, ಸೋನು ಆಸ್ಪತ್ರೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts