More

    ಬಡ ಕುಟುಂಬದ ಹುಡುಗಿಯನ್ನು ದತ್ತು ಪಡೆಯಲು ಮುಂದಾದ ಸೋನು ಗೌಡ!

    ಬೆಂಗಳೂರು: ಬಿಗ್​ಬಾಸ್ ಚೆಲುವೆ ಸೋನು ಗೌಡ ರೀಲ್ಸ್​ ಮೂಲಕವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಯುಟ್ಯೂಬ್ ಲೋಕಕ್ಕೆ ಕಾಲಿಟ್ಟ ಸೋನು ದಿನಚರಿ, ಶೂಟಿಂಗ್, ಫ್ಯಾಮಿಲಿ, ದಿನ ವ್ಲಾಗ್ ಸೇರಿದಂತೆ ಹಲವಾರು ವಿಚಾರಗಳನ್ನು ಅಪ್ಡೇಟ್ ಮಾಡುತ್ತಾರೆ.  ಆದರೆ ಇದೀಗ  ಸೋನು ಹೆಣ್ಣು ಮಗುವನ್ನು ದತ್ತು ಪಡೆಯುತ್ತೆನೆ ಎನ್ನುವ ನಿರ್ಧಾರಕ್ಕೆ ಸೋಶಿಯಲ್​​ ಮೀಡಿಯಾದಲ್ಲಿ ಪರವಿರೋಧ ಚರ್ಚೆ ನಡೆಯುತ್ತಿದೆ.

    ಸೋನು ಗೌಡ ಮನೆ ಬಳಿ ಕಟ್ಟಡ ಕಾಮಗಾರಿ ಕೆಲಸವೊಂದು ನಡೆಯುತ್ತಿದೆ. ಆ ಕಟಡದಲ್ಲಿ ರಾಯಚೂರಿನ ಕುಟುಂಬ ಒಂದು ವಾಸಿಸುತ್ತಿದ್ದಾರೆ. ಆ ಕುಟುಂಬದಲ್ಲಿ ನಾಲ್ಕು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಬಿಡುವಿನ ಸಮಯದಲ್ಲಿ ಆ ಮಕ್ಕಳ ಜೊತೆ ಸೋನು ಆಟವಾಡುತ್ತಾರೆ. ಅದರಲ್ಲೇ ಒಂದು ಹುಡುಗಿಯನ್ನು ದತ್ತು ಪಡೆಯ ಬೇಕು ಎನ್ನುವ ನಿರ್ಧಾರಕ್ಕೆ ಸೋನು ಬಂದಿದ್ದಾರೆ. ಸೋನು ಪುಟ್ಟ ಹುಡುಗಿಯನ್ನು ಸುತ್ತಾಡಲು ಜತೆಗೆ ಕೆದುಕೊಂಡು ಹೋಗಿದ್ದಾರೆ.  ಶಾಪಿಂಗ್ ಮಾಡಿದ್ದಾರೆ. ಆಕೆಗೆ ಇಷ್ಟವಾಗುವ ಬಟ್ಟೆ, ಚಪ್ಪಲಿ, ಲಿಪ್‌ಸ್ಟಿಕ್ ಮತ್ತು ತಿಂಡಿಗಳನ್ನು ಸೋನು ಗೌಡ ಕೊಡಿಸಿದ್ದಾರೆ. ಈ ವಿಡಿಯೋ ಅಪ್ಲೋಡ್ ಆದ ಮೇಲೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

    ಒಂದೆರಡು ತಿಂಗಳಿನಲ್ಲಿ ಆ ಕುಟುಂಬ ಮತ್ತೆ ರಾಯಚೂರಿನ ಕಡೆ ಹೋಗುತ್ತಿರುವ ಕಾರಣ ಸೋನು ಮಿಸ್ ಮಾಡಿಕೊಳ್ಳುತ್ತೇನೆ. ನಾಲ್ಕು ಹೆಣ್ಣು ಮಕ್ಕಳನ್ನು ಸಾಕುವುದು ಕಷ್ಟ ಆಗಬಹುದು. ಅವರ ಅಪ್ಪ ಅಮ್ಮನನ್ನು ಕೇಳಿ ದತ್ತು ತೆಗೆದುಕೊಳ್ಳುತ್ತೇನೆ. ಆಕೆಯನ್ನು ದತ್ತು ತೆಗೆದುಕೊಂಡು ಚೆನ್ನಾಗಿ ಓದಿಸಬೇಕು ಆಕೆಗೆ ಇರುವ ಕನಸುಗಳನ್ನು ಈಡೇರಿಸಬೇಕು ಎಂದು ಸೋನು ಹೇಳಿದ್ದಾರೆ. ಮಕ್ಕಳನ್ನು ಸಾಕೋದು ಅಂದ್ರೆ ವಿಡಿಯೋ ಮಾಡೋದು ಅಂತ ಅನ್ಕೊಂಡಿಯಾ?, ಬೇಡ ಇನ್ನೊಂದು ಹುಡುಗಿ ಜೀವನ ಹಾಳು ಮಾಡಬೇಡಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಳ್ಳೆ ಕೆಲಸ ಮಾಡಿದ್ರು ಜನ ಬೈತಾರೆ ,ಹೇಗಿದ್ದರೂ ಬೈತಾರೆ, ಜೀವನವೆಲ್ಲಾ ಬರಿ ಬೈತಾನೆ ಇರ್ತಾರೆ. ಸೋನುಗೆ ಬೈಯ್ಯೋದ್ರಲ್ಲೆ ಜೀವನಾನ ಕಳೆದು ಬಿಡಿ,ಯಾಕಂದ್ರೆ ಅವ್ರು ಏನೋ ಒಳ್ಳೆ ಕೆಲಸ ಮಾಡ್ತಿದ್ದಾರೆ ಅದಕ್ಕೆ ಎನ್ಕರೇಜ್ ಮಾಡಿ ಇಲ್ಲ ಅಂದ್ರೆ ನೀವ್ ಹೀಗೆ ಬೈತಾನೇ ಇರಿ, ಅವ್ರು ಏನಕ್ಕೂ ತಲೇನೆ ಕೆಡಿಸಿಕೊಳ್ಳಲ್ಲ ಅಷ್ಟೇ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts