ಬೋಲ್ಡ್ ಸೋನಿಕಾ! ಹೊಸ ಚಿತ್ರದಲ್ಲಿ ಹೊಸ ಪಾತ್ರ ...

sonika
Published on

ಬೆಂಗಳೂರು: ‘ಶತಾಯ ಗತಾಯ’, ‘ನಾನೇ ರಾಜ’ ಸಿನಿಮಾಗಳಲ್ಲಿ ನಟಿಸಿರುವ ನಟಿ ಸೋನಿಕಾ ಗೌಡ, ಇದೀಗ ಹೊಸ ಅವತಾರದಲ್ಲಿ ಎದುರಾಗುತ್ತಿದ್ದಾರೆ.

ಹಿಂದಿನ ಎರಡೂ ಚಿತ್ರಗಳಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದ ಸೋನಿಕಾ, ಇದೀಗ ಹೊಸ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಗ್ಲಾಮರ್ ಇಲ್ಲದ ಪಾತ್ರವನ್ನು ಬದಿಗಿಟ್ಟು ಬೋಲ್ಡ್ ಪಾತ್ರದ ಮೂಲಕ ಬರಲು ತಯಾರಿ ನಡೆಸಿದ್ದಾರೆ. 2019ರಲ್ಲಿ ತೆರೆಗೆ ಬಂದ ‘ನಾನೇ ರಾಜ’ ಚಿತ್ರದ ಬಳಿಕ ಬೇರಾವ ಚಿತ್ರವನ್ನು ಸೋನಿಕಾ ಒಪ್ಪಿಕೊಂಡಿಲ್ಲ. 2020 ಕರೊನಾಮಯವಾಗಿತ್ತು. ಇದೀಗ ತಮಿಳು ನಿರ್ದೇಶಕನ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈಗಾಗಲೇ ಹಲವು ಕಾಲಿವುಡ್ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಯುವನ್ ರಾಜ್, ಮೊದಲ ಬಾರಿ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರ ಪಕ್ಕಾ ಲವ್​ಸ್ಟೋರಿ ಕಥಾಹಂದರ ಹೊಂದಿದೆ ಎಂಬುದು ಸೋನಿಕಾ ಮಾತು. ‘ಇದೊಂದು ಇಂಟೆನ್ಸ್ ಪ್ರೇಮಕಥೆಯುಳ್ಳ ಸಿನಿಮಾ. ನಾನಿಲ್ಲಿ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದಿನ ಎರಡು ಸಿನಿಮಾಗಳಲ್ಲಿ ಹಳ್ಳಿ ಹುಡುಗಿಯಾಗಿದ್ದೆ. ಇದೀಗ ಬೋಲ್ಡ್ ಲುಕ್ ಕಡೆ ವಾಲಿದ್ದೇನೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರದ ಶೂಟಿಂಗ್ 21ರಿಂದ ಆರಂಭವಾಗಲಿದೆ. ಅಭಿ ಈ ಚಿತ್ರದಲ್ಲಿ ನನಗೆ ಜೋಡಿಯಾಗಿದ್ದಾರೆ’ ಎಂಬುದು ಸೋನಿಕಾ ಮಾತು. ಮಹಾಜನ್ ರಾಜೇಂದ್ರನ್ ನಿರ್ವಿುಸುತ್ತಿರುವ ಈ ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ, ಸ್ಯಾಮ್ ಸಿ.ಎಸ್ ಸಂಗೀತ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net