ಶೂಟ್ ಮಾಡಿ ಮಗನನ್ನೇ ಕೊಂದ; ತಂದೆಯ ಈ ದುಷ್ಕೃತ್ಯಕ್ಕೆ ಕಾರಣ ಇದಾ?

Son 2
Published on

ಕೊಡಗು: ತಂದೆ ತನ್ನ ಬಳಿಯ ಒಂಟಿ ನಳಿಗೆ ಕೋವಿಯಿಂದ ಮಗನನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಬಹಿರಂಗಗೊಂಡಿದೆ. ಕೊಲೆ ಆರೋಪಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಕೊಲ್ಲಲು ಕಾರಣ ಏನು ಎಂಬ ಬಗ್ಗೆ ಮಾಹಿತಿಯೊಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂದೇಟಿರ ನಿರನ್ (28) ಕೊಲೆಗೀಡಾದ ಯುವಕ. ಈತನ ತಂದೆ ನಂದೇಟಿರ ಚಿಟ್ಟಿಯಪ್ಪ (58) ಕೊಲೆ ಆರೋಪಿ. ತಂದೆ ಪೊಲೀಸರಿಗೆ ಶರಣಾಗಿದ್ದು, ವಿಚಾರಣೆ ನಡೆಯತ್ತಿದೆ.

ಮಗ ತಂದೆಗೆ ಪ್ರತಿ ತಿಂಗಳೂ ಹಣ ನೀಡಬೇಕಿತ್ತು. ಆದರೆ ಈ ಬಾರಿ ಹಣ ನೀಡಲಿಲ್ಲ. ಇದೇ ವಿಚಾರವಾಗಿ ಒಂದು ವಾರದಿಂದ ತಂದೆ ಮಗನ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಇಂದು ಕೂಡ ಮತ್ತೆ ಗಲಾಟೆ ನಡೆದಿದ್ದು, ಟಿವಿ ನೋಡುತ್ತಿದ್ದ ಸಂದರ್ಭ ತಂದೆ ಮಗನ ಮೇಲೆ ಗುಂಡು ಹಾರಿಸಿ ಸಾಯಿಸಿದ್ದಾನೆ ಎಂದು ಕೊಡಗು ಎಸ್​ಪಿ ರಾಮರಾಜನ್ ಮಾಹಿತಿ ನೀಡಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net