ಆಸ್ತಿಗಾಗಿ ಅಮ್ಮನನ್ನೇ ಕೊಂದ; ದಿನಾ ಕಿರುಕುಳ, ಇಂದು ದೊಣ್ಣೆಯಿಂದ ಹೊಡೆದು ಹತ್ಯೆ..

Son
Published on

ಧಾರವಾಡ: ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎಂಬ ಗಾದೆಯನ್ನು ನೆನಪಿಸುವಂಥ ದುರ್ದೈವದ ಘಟನೆಯೊಂದು ನಡೆದಿದೆ. ಅದರಲ್ಲೂ ಇಲ್ಲೊಬ್ಬ ಆಸ್ತಿಗಾಗಿ ಅಮ್ಮನನ್ನೇ ಕೊಲೆ ಮಾಡಿದ್ದಾನೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ (65) ಹತ್ಯೆಯಾದ ದುರ್ದೈವಿ, ಬಸವರಾಜ ಕಲ್ಲಪ್ಪ ಅಣ್ಣಿಗೇರಿ ಎಂಬಾತನೇ ತಾಯಿಯನ್ನು ಕೊಲೆ ಮಾಡಿದ ಮಗ.

ಈತ ಆಸ್ತಿ ನೀಡು ಎಂದು ದಿನವೂ ತಾಯಿಗೆ ಕಿರುಕುಳ ಕೊಡುತ್ತಿದ್ದ. ಅದಕ್ಕಾಗಿ ಒತ್ತಾಯಿಸಿ ಪೀಡಿಸುತ್ತಿದ್ದ. ಅದಾಗ್ಯೂ ತಾಯಿ ಆಸ್ತಿ ಕೊಡಲು ನಿರಾಕರಿಸಿದ್ದಕ್ಕೆ ಇಂದು ಮತ್ತೆ ಇಬ್ಬರ ಮಧ್ಯೆ ಮಾತಿನ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ಸಿಟ್ಟಾದ ಮಗ ತಾಯಿಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಈ ಸಂಬಂಧ ಅಣ್ಣಿಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net