ಮುಂಬೈ: ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ, ಒಳ್ಳೆಯ ಮತ್ತು ವಿಚಿತ್ರ ಎರಡೂ ವೈರಲ್ ಆಗುತ್ತವೆ ಮತ್ತು ಜನರು ಕಾಲಕಾಲಕ್ಕೆ ತಕ್ಕಂತೆ ವಿಡಿಯೋ ನೋಡುತ್ತಾರೆ. ಒಂದೆಡೆ ಉತ್ತಮ ನೃತ್ಯದ ವೀಡಿಯೋಗಳು ವೈರಲ್ ಆಗಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ವಿಚಿತ್ರವಾದ ಕೆಲಸ ಮಾಡುವ ವೀಡಿಯೊಗಳು ಸಹ ವೈರಲ್ ಆಗಿವೆ. ಒಟ್ಟಾರೆ ವಿಷಯವೆಂದರೆ ಎಲ್ಲಾ ರೀತಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಆದರೆ ವೀಡಿಯೋ ನೋಡಿದ್ರೆ ನೀವು ಭಾವುಕರಾಗುವುದು ಖಂಡಿತಾ ಹೌದು….
ಈ ವಿಡಿಯೋದಲ್ಲಿ ಏನಿದೆ?: ಫೋಟೋಗ್ರಾಫರ್ ಶಿವಾಜಿ ಒಂದು ದಿನ ಪಂದರಪುರ ದೇವಸ್ಥಾನಕ್ಕೆ ಭೇಟಿ ನೀಡಿದ್ದನು. ಈ ವೇಳೆ ರೈನ್‌ಕೋಟ್‌ಗಳನ್ನು ಮಾರುವ ಹತ್ತು ವರ್ಷದ ಬಾಲಕನ ವಿಡಿಯೋವನ್ನು ಸೆರೆ ಹಿಡಿದಿದ್ದನು. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರೈನ್‌ಕೋಟ್ ಮಾರಾಟ ಮಾಡುವ ಬಾಲಕನಿಗೆ 200ರೂ ಕೊಟ್ಟು ರೈನ್‌ಕೋಟ್ ಖರೀದಿಸಿದರು. ಆದರೆ ಬಾಲಕನ ಬಳಿ ಬಾಕಿ ಹಣಕೊಡಲು ಚಿಲ್ಲರೆ ಇರಲಿಲ್ಲ. ಸಮೀಪದಲ್ಲಿದ್ದ ಮಹಿಳೆಯಲ್ಲಿ ಚಿಲ್ಲರೆ ಕೇಳಿ ಪಡೆದನು. ಈ ವಿಡಿಯೋವನ್ನು ಶಿವಾಜಿ ಅವರು ಸೆರೆ ಹಿಡಿದಿದ್ದರು.
ಶಿವಾಜಿ ಅವರು ದೇವಸ್ಥಾನದಿಂದ ಬಂದ ನಂತರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಹೀಗೆ ಒಬ್ಬ ಯುವಕ ಈ ವಿಡಿಯೋ ನೋಡಿ ಸ್ನೇಹಿತನಿಗೆ ಕಳುಹಿಸಿದ್ದಾನೆ.”ಈ ರೀಲ್ನಲ್ಲಿರುವುದು ನಿನ್ನ ತಾಯಿ ಎಂಬುದು ನನ್ನ ಅನುಮಾನ, ಧ್ವನಿ ಕೂಡ ಅವರ ಧ್ವನಿಯನ್ನು ಹೋಲುತ್ತದೆ. ಆದುದರಿಂದ ಈ ರೀಲ್ ಕಳುಹಿಸಿದೆ” ಎಂದು ಹೇಳಿದ್ದನು. ಆಗ ಗೆಳೆಯ ಕಳುಸಿದ ವಿಡಿಯೋ ನೋಡಿ ಶಾಖ್ ಆಗಿದ್ದಾನೆ.
ವೀಡಿಯೋ ನೋಡಿದ ಯುವಕನಿಗೆ ಇದು ತನ್ನ ತಾಯಿಯೆಂದು ತಿಳಿಯಿತು. ಸೋಳಾಪುರದ ಛಾಯಾಗ್ರಾಹಕ ಶಿವಾಜಿ ಅವರನ್ನು ಸಂಪರ್ಕಿಸಿದಾಗ ಪಂದರಪುರದಲ್ಲಿ ವಿಡಿಯೋ ತೆಗೆಯಲಾಗಿದೆ ಎಂಬ ಮಾಹಿತಿ ಸಿಕ್ಕಿತು.
ಮಾಹಿತಿ ಲಭಿಸಿದ ತಕ್ಷಣವೇ ಪಂದರಪುರಕ್ಕೆ ತಲುಪಿದರೂ ತಾಯಿ ಪತ್ತೆಯಾಗಿರಲಿಲ್ಲ. ನಂತರ, ಸುಮಾರು ಮೂರು ಗಂಟೆಗಳ ಕಾಲ ಕಾದು ಪಂದರಪುರಕ್ಕೆ ಭೇಟಿ ನೀಡಿದರು. ಎಷ್ಟೇ ಹುಡುಕಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಸ್ವಲ್ಪ ಸಮಯದ ನಂತರ ಅದೇ ದಾರಿಯಲ್ಲಿ ನಡೆದು ಬಂದ ಒಬ್ಬ ಮಹಿಳೆಯನ್ನು ತನ್ನ ತಾಯಿಯೆಂದು ಮಗ ಗುರುತಿಸಿದಾಗ ನೆರೆದವರ ಕಣ್ಣುತುಂಬಿ ಬಂದಿತ್ತು.
ಮನೆಯಲ್ಲಿ ಕೆಲವು ಸಮಸ್ಯೆಗಳಿಂದ ಮನನೊಂದು ಮುಂಬೈ ನಿವಾಸಿಯ ತಾಯಿ ಮನೆಬಿಟ್ಟು ಹೋಗಿದ್ದರು. ಪೊಲೀಸರಿಗೆ ದೂರು ನೀಡಿ ತಿಂಗಳುಗಟ್ಟಲೆ ತಾಯಿಗಾಗಿ ಹುಡುಕಾಟ ನಡೆಸಿದರೂ, ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ತಾಯಿಯನ್ನು ಪತ್ತೆಹಚ್ಚಲು ನೆರವಾದದ್ದು ಇನ್ಸ್ಟಾಗ್ರಾಮ್ನಲ್ಲಿ ಫೋಟೋಗ್ರಾಫರ್ ಶಿವಾಜಿ ಪೋಸ್ಟ್ ಮಾಡಿದ ರೀಲ್. ಛಾಯಾಗ್ರಾಹಕ ಶಿವಾಜಿ ಧುತೆ ಅವರು ತಮ್ಮ ಆ ಒಂದು ವೀಡಿಯೊ ತಾಯಿ ಮತ್ತು ಮಗನನ್ನು ಒಂದು ಮಾಡಿರುವುದು ತುಂಬಾ ಸಂತೋಷ ತಂದಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.