VIDEO| ಅಸಿಸ್ಟೆಂಟ್​ ಕೆಲಸಕ್ಕೆ ಫ್ರೆಶರ್ಸ್​​ ಬೇಕಾಗಿದ್ದಾರೆ; ವರ್ಷದ ಪ್ಯಾಕೇಜ್​ 6 ಲಕ್ಷ ರೂ. ಎಂದ ಸೋಡಾ ಶಾಪ್​ ಮಾಲೀಕ

Soda Shop
Published on

ಭೋಪಾಲ್​: ಇತ್ತೀಚಿನ ದಿನಗಳಲ್ಲಿ ನಿರುದ್ಯೋಗಿಗಳು ಹೆಚ್ಚಾಗಿ ಸ್ವಂತ ಉದ್ದಿಮೆಯ ಕಡೆ ವಾಲುತ್ತಿದ್ದು, ವಿಭಿನ್ನ ಪ್ರಯತ್ನಗಳ ಮೂಲಕ ಜನರಿಗೆ ಹತ್ತಿರವಾಗಲು ಮುಂದಾಗುತ್ತಿದ್ದಾರೆ. ಇದರಲ್ಲಿ ಪ್ರಮುಖ ವ್ಯಾಪಾರ ಎಂದರೆ ಈಟರಿ ಶಾಪ್​ ಎಂದು ಹೇಳಬಹುದಾಗಿದೆ. ಇದರಲ್ಲಿ ಚಾಟ್ಸ್​, ಐಸ್​ಕ್ರೀಂ ಹಾಗೂ ಸೋಡಾ ಅಂಗಡಿಗಳು ಸಹ ಒಳಪಟ್ಟಿರುತ್ತವೆ. ಆದರೆ, ಸೋಡಾ ಅಂಗಡಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರೆ ತಿಂಗಳಿಗೆ 50 ಸಾವಿರ ಅಂದರೆ ವರ್ಷಕ್ಕೆ 6 ಲಕ್ಷ ರೂಪಾಯಿ ಸಂಬಳ ಕೊಡುವವರನ್ನು ನೀವು ಎಲ್ಲಾದರೂ ನೋಡಿದ್ದೀರಾ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್​ ಆಗುತ್ತಿದ್ದು, ಸಖತ್​ ಟ್ರೆಂಡ್​ ಆಗುತ್ತಿದೆ.

ಮಧ್ಯಪ್ರದೇಶದ ಭೋಪಾಲ್​ ಮೂಲದ ಕಂಟೆಂಟ್​ ಕ್ರಿಯೇಟರ್​ ನರೇಂದ್ರ ರಜಪೂತ್​ ಎಂಬುವವರು ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇದಲ್ಲದೆ ವಿಡಿಯೋ ಈವರೆಗೂ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ನೆಟ್ಟಿಗರು ಕಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಸೋಡಾ ಅಂಗಡಿಯ ಮಾಲೀಕ ನರೇಂದ್ರ ರಜಪೂತ್​ ರಾಜಸ್ಥಾನಿ ಸೋಡಾ ಶಾಪ್, ಡೆಪೋ ಚೌರಾಹಾದಲ್ಲಿರುವ ಅಂಗಡಿಗೆ ಸಹಾಯಕರು ಬೇಕಾಗಿದ್ದು, ನಾನು ತಿಂಗಳಿಗೆ 50 ಸಾವಿರ ಅಂದರೆ ವರ್ಷಕ್ಕೆ 6 ಲಕ್ಷ ರೂಪಾಯಿ ಸಂಬಳ ಕೊಡುತ್ತೇನೆ. ನನ್ನ ದೈನಂದಿನ ಆದಾಯವನ್ನು ನೀವು ಕೇಳಬೇಡಿ. ನಿಮಗೆ ಕೆಲಸ ಬೇಕೇ ಇಲ್ಲಿಗೆ ಬನ್ನಿ. ಮುಖ್ಯವಾಗಿ ಫ್ರೆಶರ್​ಗಳು ಬಂದರೆ ಉತ್ತಮ ಎಂದು ಹೇಳುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಫ್ಯಾಕ್ಟ್​ಚೆಕ್​ ಮಾಡಿದಾಗ ಇದು ಮನರಂಜನೆಯ ಉದ್ಧೇಶಕ್ಕಾಗಿ ಮಾಡಲಾಗಿದೆ ಎಂದು ಹೇಳಲಾಗಿದ್ದು, ಜನರು ರೀಲ್ಸ್​ಗೆ ತಮ್ಮದೇ ಶೈಲಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರು ಐಟಿ ಸೆಕ್ಟರ್​ನವರಿಗೆ ನೀವು ಟಕ್ಕರ್​ ಕೊಡಲು ಮುಂದಾಗಿದ್ದೀರಾ ಎಂದು ಹೇಳಿದರೆ. ಹಲವರು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಮನರಂಜನೆಗಾಗಿ ಮಾಡಿದ ಈ ವಿಡಿಯೋ ಈಗ ಸಖತ್​ ಟ್ರೆಂಡ್​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net