ಸಮಾಜ ಸೇವಾ ಸಹಕಾರಿ ಸಂಘ ಗ್ರಾಹಕ ಸಮ್ಮಿಲನ

Btw_Social Service
Published on

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘದ ಕುಕ್ಕಾಜೆ ಶಾಖೆಯ 25ನೇ ವರ್ಷಾಚರಣೆ ಅಂಗವಾಗಿ ಸದಸ್ಯ ಗ್ರಾಹಕ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಖೆಯ ಏಳಿಗೆಗೆ ಶ್ರಮಿಸಿದ ಎಲ್ಲ ಸದಸ್ಯ ಗ್ರಾಹಕರಿಗೆ ಅಭಿನಂದನೆ. ಮುಂದೆಯು ಉತ್ತಮ ಸಹಕಾರ ನೀಡಬೇಕು ಎಂದರು.

ಮಂಚಿ ಶಾಲೆ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಗಣೇಶ್ ಐತಾಳ್, ಸಂಘದ ಸ್ಥಾಪಕಾಧ್ಯಕ್ಷ ಡಾ.ಅಮ್ಮೆಂಬಳ ಬಾಳಪ್ಪರ ಜತೆಗಿನ ಒಡನಾಟ ನೆನಪಿಸಿದರು. ಪಣೋಲಿಬೈಲು ಕ್ಷೇತ್ರದ ಅರ್ಚಕ ನಾರಾಯಣ ಮೂಲ್ಯ, ಮಹಾದೇವಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮೋಹನ ನಾಯಕ್, ಯಕ್ಷಗಾನ ಕಲಾವಿದ ಮಹಾಬಲ ರೈ ನಗ್ರಿಗುತ್ತು ಶುಭ ಹಾರೈಸಿದರು.

ಕುಕ್ಕಾಜೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಇಬ್ರಾಹಿಂ, ಕಟ್ಟಡ ಮಾಲೀಕ ಜೆಫ್ರಿ ಲೂಯಿಸ್, ರೋಹಿಣಿ ಉಮೇಶ್ ಕುಲಾಲ್ ಮಂಚಿ, ವಿಟ್ಲ ಕುಲಾಲ ಸಂಘ ಅಧ್ಯಕ್ಷ ಬಿ.ಕೆ.ಬಾಬು, ಮಂಚಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅನ್ಸಾರ್, ಪಿಡಿಒ ನಿರ್ಮಲ, ಸಂಘದ ಉಪಾಧ್ಯಕ್ಷ ಪದ್ಮನಾಭ ವಿ, ಕುಕ್ಕಾಜೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ನಾಗೇಶ್ ಬಾಳೆಹಿತ್ಲು, ಸಲಹಾ ಸಮಿತಿ ಸದಸ್ಯ ನವೀನ ಉಪಸ್ಥಿತರಿದ್ದರು.

ಆದ್ಯ ಪಿ.ಬಿ, ವಿಂದ್ಯಾ ಪಿ.ಬಿ.ಕಾಂಜಿಲ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕಿ ಸವಿತಾ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಸ್ತಾವನೆಗೈದರು. ಶಾಖಾ ವ್ಯವಸ್ಥಾಪಕಿ ಕಮಲ ಸಹಕರಿಸಿದರು. ಶಾಖಾ ವ್ಯವಸ್ಥಾಪಕ ಸುಂದರ ಮೂಲ್ಯ ವಂದಿಸಿದರು. ಕಿರಿಯ ಸಹಾಯಕ ಶಿವರಾಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ, ಶಾಖಾ ವ್ಯವಸ್ಥಾಪಕಿ ಯಶೋದಾ ಸಹಕರಿಸಿದರು.

ಗಣಪತಿಹೋಮ, ಲಕ್ಷ್ಮೀ ಪೂಜೆ

ಗಣಹೋಮ ಮತ್ತು ಶ್ರೀ ಲಕ್ಷ್ಮೀ ಪೂಜೆ ನೆರವೇರಿತು. ಗ್ರಾಹಕರು ಮತ್ತು ಸಿಬ್ಬಂದಿಯನ್ನು ಗೌರವಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ ಅಮೂಲ್ಯ ಸ್ವ-ಸಹಾಯ ಸಂಘಗಳನ್ನು ಅಭಿನಂದಿಸಲಾಯಿತು. ಪಣೋಲಿಬೈಲಿನ ಪ್ರಧಾನ ಅರ್ಚಕ ವಾಸುದೇವ ಮೂಲ್ಯ ಪ್ರಸಾದ ನೀಡಿ ಹರಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net