More

    ಬ್ಯೂಟಿಪಾರ್ಲರ್​ನ ಬೆಡ್​ ಬಾಕ್ಸ್​ನಲ್ಲಿತ್ತು ಟಿಕ್​ಟಾಕ್​ ಸುಂದರಿಯ ಶವ: ಪೊಲೀಸರಿಗೆ ಕಾದಿತ್ತು ಶಾಕ್​

    ಚಂಡೀಗಢ: ಟಿಕ್​ಟಾಕ್​ ಸ್ಟಾರ್​ ಸಿಯಾ ಕಕ್ಕರ್​ ಆತ್ಮಹತ್ಯೆ ಬೆನ್ನಲ್ಲೇ ಟಿಕ್​ಟಾಕ್​ ಖ್ಯಾತಿಯ ಮತ್ತೊರ್ವ ಯುವತಿ ತನ್ನ ಬ್ಯೂಟಿ ಪಾರ್ಲರ್​ನ ಬೆಡ್​ ಬಾಕ್ಸ್​ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹರಿಯಾಣದ ಸೋನಿಪತ್​ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಯುವತಿಯನ್ನು ಶಿವಾನಿ (20) ಎಂದು ಗುರುತಿಸಲಾಗಿದೆ. ಆಕೆಯ ಶವವನ್ನು ಬಿಸಿನೆಸ್​ ಪಾಲುದಾರ ನೀರಜ್​ ಎಂಬಾತ ಭಾನುವಾರ ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ನೋಡಲು ಚೀನಾ ಅಧ್ಯಕ್ಷರಂತೆ ಕಾಣುವ ಈ ವ್ಯಕ್ತಿಗೆ ಇದೆಂಥಾ ಶಿಕ್ಷೆ…!

    ಸಂತ್ರಸ್ತೆಯು ತನ್ನ ಸಹೋದರಿಯೊಂದಿಗೆ ಹಾಗೂ ನೀರಜ್​ ಸಹಕಾರದೊಂದಿಗೆ ಸೋನಿಪತ್​ನ ಕುಂಡ್ಲಿ ನಗರದಲ್ಲಿ ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ಸ್ಥಳೀಯ ನಿವಾಸಿ ಆರೀಫ್​ ಮೊಹಮ್ಮದ್​ ಎಂದು ಗುರುತಿಸಲಾಗಿದೆ.

    ಸಾಮಾಜಿಕ ಜಾಲತಾಣ ಆ್ಯಪ್​ ಟಿಕ್​ಟಾಕ್​ನಲ್ಲೂ ಪ್ರಖ್ಯಾತಿಯನ್ನು ಹೊಂದಿದ್ದ ಶಿವಾನಿ, ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದರು.

    ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ವೀರೆಂದರ್​ ಸಿಂಗ್​, ಆರೋಪಿ ಆರೀಫ್​ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಹತ್ಯೆ ಮಾತ್ರವಲ್ಲದೇ ಆಕೆಯ ಕುಟುಂಬದೊಂದಿಗೆ ಕೊಲೆ ಮಾಡಿದ ರಾತ್ರಿಯಿಡಿ ಮಾತನಾಡಿದ್ದಾನೆ ಎಂದು ತಿಳಿಸಿದ್ದಾರೆ. ಅದ್ಯ ಆತನನ್ನು ಕೋರ್ಟ್​ ಮುಂದೆ ಪ್ರಸ್ತುತ ಪಡಿಸಲಾಗಿದೆ.

    ಇದನ್ನೂ ಓದಿ: ಟಿಕ್‌ಟಾಕ್‌ ಬ್ಯಾನ್‌ ಬೆನ್ನಲ್ಲೇ ಚಿಗುರಿತು ‘ಚಿಂಗಾರಿ’: ಲಕ್ಷ ಲಕ್ಷ ಡೌನ್‌ಲೋಡ್‌

    ಆರೋಪಿ ಶುಕ್ರವಾರ ಸಂಜೆ ಕೊಲೆ ಮಾಡಿದ್ದು, ಆ ದಿನ ನೀರಜ್​ ನಗರದಿಂದ ಹೊರ ಹೋಗಿದ್ದ. ಆರೋಪಿಯು ದುಪ್ಪಟ್ಟದಿಂದ ಕುತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ, ನೀರಜ್​ ಉಪಯೋಗಿಸುತ್ತಿದ್ದ ಬೆಡ್​ನಲ್ಲಿ ತುಂಬಿ ಪರಾರಿಯಾಗಿದ್ದಾನೆ. ಸಲೂನ್​ನಲ್ಲಿ ಕೆಟ್ಟ ವಾಸನೆ ಬರುತ್ತಿದ್ದುದ್ದನ್ನು ಗಮನಿಸಿ ಪರಿಶೀಲಿಸಿದಾಗ ಶಿವಾನಿ ಮೃತದೇಹ ನೀರಜ್​ಗೆ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ವೀರೆಂದರ್​ ಸಿಂಗ್​ ಹೇಳಿದ್ದಾರೆ.

    ಇನ್ನು ಆರೋಪಿ ಆರೀಫ್​ ಬಗ್ಗೆ ಮಾತನಾಡಿರುವ ಶಿವಾನಿ ಕುಟುಂಬ, ಆತ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಟಿಕ್‌ಟಾಕ್‌ ಮಾಡಿ ಲಕ್ಷ ಗೆಲ್ಲಿ! ಡಿಕೆಶಿ ಪರ ನಲ್‌ಪಾಡ್‌ ಘೋಷಣೆ- ನೆಟ್ಟಿಗರ ಆಕ್ರೋಶ

    VIDEO| ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಪಾರಾಗಿದ್ಹೇಗೆ?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts