VIDEO| ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಪಾರಾಗಿದ್ಹೇಗೆ?​

ಚಾಮರಾಜನಗರ: ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿಯೊಂದು ಪಲ್ಟಿಯಾದ ಘಟನೆ ತಮಿಳುನಾಡಿನ ದಿಂಬಂ 23ನೇ ತಿರುವಿನಲ್ಲಿ ನಡೆದಿದೆ. ಹೇವಿ ಲೋಡ್​ನಿಂದಾಗಿ ಸ್ಟೇರಿಂಗ್ ಜಾಮ್ ಆಗಿ ರಸ್ತೆ ತಿರುವಿನಲ್ಲೇ ಲಾರಿ ಕೆಟ್ಟು ನಿಂತಿತ್ತು. ಏನು ಮಾಡಲಾಗದೆ ಲಾರಿಯಿಂದ ಡ್ರೈವರ್ ಮತ್ತು ಕ್ಲೀನರ್​ ಕೆಳಗಿಳಿದಿದ್ದರು. ಇದಾದ ಕ್ಷಣಾರ್ಧದಲ್ಲೇ ಲಾರಿ ಪಲ್ಟಿಯಾಗಿದೆ. ಇದನ್ನೂ ಓದಿ: ನೋಡಲು ಚೀನಾ ಅಧ್ಯಕ್ಷರಂತೆ ಕಾಣುವ ಈ ವ್ಯಕ್ತಿಗೆ ಇದೆಂಥಾ ಶಿಕ್ಷೆ…! ಲಾರಿಯಲ್ಲಿದ್ದ ಕಬ್ಬು ರಸ್ತೆಯಲ್ಲಿ‌ ಚೆಲ್ಲಾ ಪಿಲ್ಲಿಯಾಗಿದ್ದು, ಅದೃಷ್ಟವಶಾತ್ ಡ್ರೈವರ್ ಮತ್ತು ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. … Continue reading VIDEO| ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಪಾರಾಗಿದ್ಹೇಗೆ?​