More

    VIDEO| ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಪಾರಾಗಿದ್ಹೇಗೆ?​

    ಚಾಮರಾಜನಗರ: ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿಯೊಂದು ಪಲ್ಟಿಯಾದ ಘಟನೆ ತಮಿಳುನಾಡಿನ ದಿಂಬಂ 23ನೇ ತಿರುವಿನಲ್ಲಿ ನಡೆದಿದೆ.

    ಹೇವಿ ಲೋಡ್​ನಿಂದಾಗಿ ಸ್ಟೇರಿಂಗ್ ಜಾಮ್ ಆಗಿ ರಸ್ತೆ ತಿರುವಿನಲ್ಲೇ ಲಾರಿ ಕೆಟ್ಟು ನಿಂತಿತ್ತು. ಏನು ಮಾಡಲಾಗದೆ ಲಾರಿಯಿಂದ ಡ್ರೈವರ್ ಮತ್ತು ಕ್ಲೀನರ್​ ಕೆಳಗಿಳಿದಿದ್ದರು. ಇದಾದ ಕ್ಷಣಾರ್ಧದಲ್ಲೇ ಲಾರಿ ಪಲ್ಟಿಯಾಗಿದೆ.

    ಇದನ್ನೂ ಓದಿ: ನೋಡಲು ಚೀನಾ ಅಧ್ಯಕ್ಷರಂತೆ ಕಾಣುವ ಈ ವ್ಯಕ್ತಿಗೆ ಇದೆಂಥಾ ಶಿಕ್ಷೆ…!

    ಲಾರಿಯಲ್ಲಿದ್ದ ಕಬ್ಬು ರಸ್ತೆಯಲ್ಲಿ‌ ಚೆಲ್ಲಾ ಪಿಲ್ಲಿಯಾಗಿದ್ದು, ಅದೃಷ್ಟವಶಾತ್ ಡ್ರೈವರ್ ಮತ್ತು ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅನೇಕ ಲಾರಿಗಳು ರಸ್ತೆಯಲ್ಲೇ ನಿಲ್ಲುವಂತಾಯಿತು. ಸ್ಥಳಕ್ಕೆ ತಮಿಳುನಾಡು ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿ ಪಲ್ಟಿ

    ಚಾಮರಾಜನಗರ: ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿಯೊಂದು ಪಲ್ಟಿಯಾದ ಘಟನೆ ತಮಿಳುನಾಡಿನ ದಿಂಬಂ 23ನೇ ತಿರುವಿನಲ್ಲಿ ನಡೆದಿದೆ.#Chamarajanagara #Lorry #TamilNadu #Dhimbam #Sugarcane

    Posted by Vijayavani on Tuesday, June 30, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts