More

    ಟಿಕ್‌ಟಾಕ್‌ ಮಾಡಿ ಲಕ್ಷ ಗೆಲ್ಲಿ! ಡಿಕೆಶಿ ಪರ ನಲ್‌ಪಾಡ್‌ ಘೋಷಣೆ- ನೀವೊಮ್ಮೆ ಕೇಳಿ…

    ಬೆಂಗಳೂರು: ನಿಜವಾದ ಭಾರತೀಯರೆಲ್ಲರೂ ಇದೀಗ ಚೀನಾದ ವಿರುದ್ಧ ತಿರುಗಿಬಿದ್ದಿದ್ದಾರೆ. ನೆರೆಹೊರೆಯ ದೇಶಗಳು ಕೂಡ ಭಾರತದ ಬೆಂಬಲಕ್ಕೆ ಬಂದಿವೆ.

    ಚೀನಾದ ಆ್ಯಪ್‌ಗಳು ಸೇರಿದಂತೆ ಚೀನಿ ವಸ್ತುಗಳ ಬಹಿಷ್ಕಾರದ ಕೂಗು ಜೋರಾಗಿದೆ. ಈ ಬಗ್ಗೆ ಭಾರಿ ಅಭಿಯಾನವೇ ನಡೆಯುತ್ತಿದೆ. ಚೀನಾ ಬಂಡವಾಳ ಹಾಕಿರುವ ಉದ್ಯೋಗ ತಮಗೆ ಬೇಡವೇ ಬೇಡ, ಉಪವಾಸ ಬೇಕಾದರೂ ಸಾಯುವೆವು ಎಂದು ಕೆಲವು ಜೊಮೆಟೊ ಸಿಬ್ಬಂದಿ ಉದ್ಯೋಗ ತೊರೆದಿದ್ದಾರೆ. ಕೇಂದ್ರ ಸರ್ಕಾರ ಕೂಡ ನಿನ್ನೆಯಷ್ಟೇ ಟಿಕ್‌ಟಾಕ್‌ ಸೇರಿದಂತೆ ಚೀನಾದ 59 ಆ್ಯಪ್‌ಗಳಿಗೆ ನಿಷೇಧ ಹೇರಿದೆ.

    ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ನಾಡಿದ್ದು ಅಂದರೆ ಜುಲೈ 2ರಂದು ಅಧಿಕಾರ ಸ್ವೀಕಾರ ಮಾಡಲಿರುವ ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಅವರ ಅಭಿಮಾನಿಗಳು ಟಿಕ್‌ಟಾಕ್‌ ಸ್ಪರ್ಧೆ ಏರ್ಪಡಿಸಿದ್ದಾರೆ. ಈ ಕುರಿತು ಪೋಸ್ಟ್ ಒಂದನ್ನು ಮೊಹಮ್ಮದ್ ಹ್ಯಾರಿಸ್ ನಲಪಾಡ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದು, ಟಿಕ್‌ಟಾಕ್‌ ಸ್ಪರ್ಧೆ ಆಯೋಜಿಸಿರುವುದಾಗಿ ಘೋಷಣೆ ಮಾಡಿದ್ದಾರೆ. ಮೊನ್ನೆ ಭಾನುವಾರ (ಜೂನ್‌ 28) ಕೊನೆಯ ದಿನ ಎಂದೂ ಘೋಷಿಸಲಾಗಿದೆ.

    ಈ ಘೋಷಣೆ ಮೂಡಿಬಂದದ್ದು ಟಿಕ್‌ಟಾಕ್‌ ಬ್ಯಾನ್‌ ಮಾಡುವ ಮುಂಚೆ. ಅಂದರೆ ಜುಲೈ 26ರಂದು. ಆದರೆ ಅದಾಗಲೇ ಚೀನಾ ಆ್ಯಪ್‌ ಅದರಲ್ಲಿಯೂ ಭಾರತ ಒಂದರಿಂದಲೇ ಸಹಸ್ರಾರು ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುತ್ತಿರುವ ಟಿಕ್‌ಟಾಕ್‌ ಆ್ಯಪ್‌ ನಿಷೇಧದ ಕಾವು ಜೋರಾಗಿದ್ದ ವೇಳೆ ನಲ್‌ಪಾಡ್‌ ಈ ಘೋಷಣೆ ಮಾಡಿದ್ದಾರೆ.

    30 ಸೆಕೆಂಡ್‌ಗಳ ಟಿಕ್‌ಟಾಕ್‌ ವಿಡಿಯೋ ಮಾಡಿ ನಮಗೆ ಕಳುಹಿಸಿಕೊಡಿ. ಆಯ್ಕೆಯಾದ 10 ವಿಡಿಯೋಗಳಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡಲಾಗುವುದು. ಡಿಕೆಎಸ್‌ ಪವರ್‌ ಹ್ಯಾಷ್‌ಟ್ಯಾಗ್‌ ಹೊಂದಿರಬೇಕು ಇತ್ಯಾದಿಯಾಗಿ ಷರತ್ತುಗಳನ್ನು ವಿಧಿಸಿದ್ದಾರೆ.

    ಈ ವಿಡಿಯೋವನ್ನು ಕಾಂಗ್ರೆಸ್‌ನ ಕಾರ್ಯಕರ್ತರು, ಅಭಿಮಾನಿಗಳು ಎಲ್ಲರೂ ತುಂಬಾ ಸಂತಸದಿಂದ ಶೇರ್‌ ಮಾಡಿಕೊಂಡಿದ್ದಾರೆ.

    ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ದೇಶಪ್ರೇಮಿಗಳಿಗೆ ಕಿಚ್ಚು ಹತ್ತಿಸಿದೆ. ಡಿಕೆಶಿವಕುಮಾರ್‌, ಕಾಂಗ್ರೆಸ್‌ ಹಾಗೂ ನಲ್‌ಪಾಡ್‌ ಕುರಿತಂತೆ ಅಪಾರ ರೀತಿಯಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಕೊನೆಯ ಪಕ್ಷ ಡಿಕೆಶಿಯಾದರೂ ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಇದನ್ನು ನಿಲ್ಲಿಸಬಹುದಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts