More

    ಸ್ಯಾಮ್​ ಪಿತ್ರೋಡ ಹೇಳಿಕೆಗೆ ನನ್ನ ಸಹಮತ ಇಲ್ಲ. ದೇಶದ ಜನರಲ್ಲಿ ಅವರು ಕ್ಷಮೆ ಕೇಳಬೇಕು: ಎಚ್​.ಕೆ. ಪಾಟೀಲ

    ವಿಜಯವಾಣಿ ಸುದ್ದಿಜಾಲ ಗದಗ
    ಜವಾಬ್ದಾರಿಯುತ ನಾಗರಿಕ ಬಣ್ಣದ ಮೇಲೆ ಜನಾಂಗವನ್ನು ಪ್ರತ್ಯೇಕಿಸುವುದು ಬಾರತೀಯ ಸಂಸತಿ ಅಲ್ಲ ಎಂದು ಸ್ಯಾಮ್​ ಪಿತ್ರೋಡ ಹೇಳಿಕೆಗೆ ಎಚ್​.ಕೆ. ಪಾಟೀಲ ವಿರೋಧ ವ್ಯಕ್ತಪಡಿಸಿದರು.
    ಪಿತ್ರಾಜಿರ್ತ ಆಸ್ತಿಯಲ್ಲಿ ಶೇ.55 ರಷ್ಟು ಸರ್ಕಾರಕ್ಕೆ ವರ್ಗಾಯಿಸುವ ಕಾನೂನು ಜಾರಿ ತರಬೇಕು ಎಂದು ಹೇಳಿಕೆ ನೀಡಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಕಂಟಕ ತಂದೊಡ್ಡಿದ್ದ ಸ್ಯಾಮ್​ ಪಿತ್ರೋಡ ಬಣ್ಣದ ಆಧಾರದಲ್ಲಿ ಜನಾಂಗೀಯ ಹೇಳಿಕೆ ನೀಡಿ ಕಾಂಗ್ರೆಸ್​ ಪಕ್ಷಕ್ಕೆ ಸಂಕಷ್ಟ ತಂದೊಡ್ಡಿದ್ದರು. ಸ್ಯಾಮ್​ ಹೇಳಿಕೆಗೆ ನಗರದಲ್ಲಿ ಎಚ್​.ಕೆ. ಪಾಟೀಲ ವಿರೋಧ ವ್ಯಕ್ತಪಡಿಸಿ, ಕೇವಲ ಭಾರತೀಯರನ್ನೇ ಅಷ್ಟೆ ಅಲ್ಲದೇ ಆಫ್ರಿಕನ್​ ಅವರನ್ನು ಸ್ಯಾಮ್​ ಪಿತ್ರೋಡ ನೋಯಿಸಿದ್ದಾರೆ. ಅದು ಅವರ ಮನಸ್ಥಿತಿ ಏನೆಂಬುದನ್ನು ತಿಳಿಸುತ್ತದೆ. ಸುಧಾರಿತರು, ಸುಂಸತರು, ಮೇಧಾವಿಗಳು, ಬುದ್ಧಿವಂತರು ಎಂಬುವರು ಈ ರೀತಿಯ ಆಲೋಚನೆ ಅವರ ಮನಸ್ಥಿತಿಯಲ್ಲಿ ಹುಟ್ಟಲೇಬಾರದು. ಸ್ಯಾಮ್​ ಪಿತ್ರೋಡ ಅವರ ಹೇಳಿಕೆಗೆ ನನ್ನ ಸಹಮತ ಇಲ್ಲ. ಅವರ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ದೇಶದ ಜನರಲ್ಲಿ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts