ಕಲ್ಕಿ 2898 ಎಡಿ ಸಿನಿಮಾಕ್ಕೂ ನಟಿ ಸೋಭಿತಾಗೆ ಇರುವ ನಂಟೇನು ಗೊತ್ತಾ; ಅವರ ಪಾತ್ರವೇನು ಇಲ್ಲಿದೆ ಡೀಟೇಲ್ಸ್​

Untitled-design-2024-07-01T201347.256
Published on

ಹೈದರಾಬಾದ್​​: ನಾಗ್​ ಅಶ್ವಿನ್​ ನಿರ್ದೇಶನದ 'ಕಲ್ಕಿ 2898 ಎಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದೆ. ವಿಶ್ವದಾದ್ಯಂತ 500 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ತೆಲುಗು ಮತ್ತು ಹಿಂದಿಯಲ್ಲಿ ಹೆಚ್ಚು ಗಳಿಸಿದೆ ಎನ್ನಲಾಗಿದೆ.

ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಕಮಲ್​ ಹಾಸನ್​ ಸೇರಿದಂತೆ ಬಹುತಾರಾಗಣವಿದೆ. ಹಲವಾರು ವಿಶೇಷ ಪಾತ್ರಗಳು ಮತ್ತು ಅತಿಥಿ ಪಾತ್ರಗಳಲ್ಲಿ ಹಲವು ತಾರೆಯರು ನಟಿಸಿದ್ದಾರೆ. ಅಂದ್ಹಾಗೆ ನಾಯಕಿ ಸೋಭಿತಾ ಧೂಳಿಪಾಳ ಕೂಡ ಈ ಸಿನಿಮಾದ ಭಾಗವಾಗಿದ್ದಾರೆ. ಯಾವ ಪಾತ್ರದಲ್ಲಿ ನಟಿಸಿದ್ದಾರೆ? ಎಂಬ ಕುತೂಹಲದ ಪ್ರಶ್ನೆ ಮೂಡುವುದು ಸಹಜ.

ಈ ಚಿತ್ರದ ಮೂಲಕ ನಟಿ ದೀಪಿಕಾ ಪಡುಕೋಣೆ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಸಲಿಗೆನ ಮೊದಲು ತೆಲುಗಿನಲ್ಲಿ ದೀಪಿಕಾ ತಮ್ಮ ಪಾತ್ರಕ್ಕೆ ಡಬ್​ ಮಾಡಿದ್ದಾರೆ ಎನ್ನಲಾಗಿತ್ತು. ಟ್ರೇಲರ್​ನಲ್ಲಿಯೂ ಆಕೆಯ ಧ್ವನಿ ಕೇಳಿಬಂದಿತ್ತು. ಆದರೆ ದೀಪಿಕಾ ಅವರ ಡಬ್ಬಿಂಗ್​​ಗೆ ನೆಗೆಟಿವ್​​ ಕಾಮೆಂಟ್​ ಬರಲಾರಂಭಿಸಿದ ಬಳಿಕ, ದೀಪಿಕಾ ಅವರ ಪಾತ್ರಕ್ಕೆ ಸೋಭಿತಾ ಅವರಿಂದ ಡಬ್​ ಮಾಡಿಸಲಾಗಿದೆ ಎನ್ನಲಾಗಿದೆ. ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಮಾಹಿತ ಬಂದಿಲ್ಲವಾದರೂ, ನಟಿ ಸೋಭಿತಾ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಸೋಭಿತಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕ್ರೆಡಿಟ್ ರೋಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರ ಹೆಸರನ್ನು ಬರೆಯಲಾಗಿದೆ. ನಟಿ, ನಿರ್ದೇಶಕ ನಾಗ್ ಅಶ್ವಿನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಹಾರ್ಟ್​​ ಎಮೋಜಿಯೊಂದಿಗೆ ಸ್ವೀಟೆಸ್ಟ್​​ ಎಂದು ಬರೆದಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net