More

    ಹಿಂದೆಂದೂ ನೋಡಿರದ ವಿಚಿತ್ರ ಬೌಲಿಂಗ್​! ಇಷ್ಟು ದಿನ ಎಲ್ಲಿದ್ಯಪ್ಪ? ಇನ್ಮೇಲೆ ಎಲ್ಲ ವಿಶ್ವಕಪ್​ ನಮ್ದೇ ಎಂದ ನೆಟ್ಟಿಗರು

    ನವದೆಹಲಿ: ಸಾಮಾನ್ಯವಾಗಿ ಪ್ರತಿಯೊಬ್ಬ ಬೌಲರ್ ವಿಶಿಷ್ಟವಾದ ಬೌಲಿಂಗ್ ಶೈಲಿಯನ್ನು ಹೊಂದಿರುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಲಸಿತ್ ಮಾಲಿಂಗ ಅವರಂತಹ ಬೌಲರ್‌ಗಳ ಶೈಲಿಯು ಇತರೆ ಬೌಲರ್‌ಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಈ ನಡುವೆ ಟೀಂ ಇಂಡಿಯಾದ ಹಿರಿಯ ಆಟಗಾರ ರವಿಚಂದ್ರನ್​ ಅಶ್ವಿನ್​, ಯುವ ಬೌಲರ್​ ಒಬ್ಬರ ಬೌಲಿಂಗ್​ ಆ್ಯಕ್ಷನ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೇಲಾಗಿ ಅವರ ಅಭಿಮಾನಿಯಾಗಿದ್ದೇನೆ ಎಂದಿದ್ದಾರೆ. ಹಾಗಾದರೆ ಆ ಬೌಲರ್ ಯಾರು? ಅಶ್ವಿನ್ ಅವರನ್ನು ಮೆಚ್ಚಿಸಲು ಅವರು ಹೇಗೆ ಬೌಲಿಂಗ್ ಮಾಡಿದರು? ಎಂಬುದನ್ನು ನಾವೀಗ ತಿಳಿಯೋಣ.

    ಆ ಯುವ ಬೌಲರ್​ ಹೆಸರು ಕೆ. ಬಾಲಾಜಿ. ಇವರು ಮಧ್ಯಮ ವೇಗಿ. ತಮಿಳುನಾಡಿನಲ್ಲಿ ನಡೆಯುತ್ತಿರುವ ಎಸ್‌ಎಸ್ ರಾಜನ್ ಟಿ20 ಟೂರ್ನಿಯಲ್ಲಿ ಬಾಲಾಜಿ ಅವರು ಒಂದು ಓವರ್‌ನ ಆರು ಎಸೆತಗಳನ್ನು ಆರು ವಿಭಿನ್ನ ರೀತಿಯಲ್ಲಿ ಎಸೆದಿದ್ದಾರೆ. ಸೇಲಂ ಮೈದಾನದಲ್ಲಿ ತಿರುವಾವೂರ್ ಮತ್ತು ತಿರುಪತ್ತೂರ್ ನಡುವೆ ಪಂದ್ಯ ನಡೆಯಿತು. ಈ ವೇಳೆ ಬಾಲಾಜಿ ಅವರು 18ನೇ ಓವರ್ ಬೌಲ್ ಮಾಡಿದರು. ಅವರು ಪ್ರತಿ ಚೆಂಡನ್ನು ವಿಭಿನ್ನ ರೀತಿಯ ಬೌಲಿಂಗ್ ಶೈಲಿಯೊಂದಿಗೆ ಬೌಲ್ ಮಾಡಿದರು.

    ಬಾಲಾಜಿ ಅವರು ಮೊದಲ ಎಸೆತವನ್ನು ಚಹಲ್‌ರಂತೆ ಎಸೆದರು. ಎರಡನೇ ಎಸೆತವನ್ನು ಬುಮ್ರಾರಂತೆ ಓಡಿ ಬಂದು ಎಸೆದರು. ಮೂರನೇ ಎಸೆತದ ವೇಳೆ ಅರ್ಧ ದೇಹವನ್ನು ಬಾಗಿಸಿ ಓಡಿ ಬಂದು ಎಸೆದರು. ನಾಲ್ಕನೇ ಚೆಂಡನ್ನು ಎರಡೂ ಕೈಗಳನ್ನು ಚಾಚಿ ಹಾಗೂ ಐದನೇ ಎಸೆತವನ್ನು ಸಾಧಾರಣ ಮಧ್ಯಮ ವೇಗಿಯಂತೆ ಬೌಲ್ ಮಾಡಿದರು ಮತ್ತು ಆರನೇ ಎಸೆತವನ್ನು ಬಲಗೈ ಅನ್ನು ಸಂಪೂರ್ಣ ಮೇಲಕ್ಕೆ ಎತ್ತಿ, ಓಡಿಬಂದು ಬೌಲ್ ಮಾಡಿದರು.

    ರವಿಚಂದ್ರನ್​ ಅಶ್ವಿನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ‘ಬಾಲಾಜಿ ನನ್ನ ಹೊಸ ಅಡಿಕ್ಷನ್​’ ಎಂದು ಬರೆದಿದ್ದಾರೆ. ಈ ನಡುವೆ ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿ ಬೌಲಿಂಗ್ ಮಾಡು ಬಾ ಬಾಬು.. ಇಷ್ಟು ದಿನ ಎಲ್ಲಿದ್ದೆ? ನೀನು ಈ ರೀತಿ ಬೌಲಿಂಗ್​ ಮಾಡಿದರೆ ಎಲ್ಲ ವಿಶ್ವಕಪ್ ನಮ್ಮದಾಗುತ್ತೆ ಎಂದು ತಮಾಷೆಯ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

    ಪಶ್ಚಾತಾಪದ ಮಾತೇ ಇಲ್ಲ ಬೆತ್ತಲಾಗಿ ಆ ಚಿತ್ರದಲ್ಲೂ ನಟಿಸಲು ರೆಡಿ ಎಂದ ನಟಿ ಶ್ವೇತಾ ಮೆನನ್​!

    ಪಾಕಿಸ್ತಾನದಲ್ಲಿ ಮತದಾನ ಮುಗಿದು 24 ಗಂಟೆಯಾದ್ರೂ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts