More

    ಪಾಕಿಸ್ತಾನದಲ್ಲಿ ಮತದಾನ ಮುಗಿದು 24 ಗಂಟೆಯಾದ್ರೂ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ ಏಕೆ?

    ಇಸ್ಲಮಾಬಾದ್​: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಮತದಾನ ಮುಗಿದು ಸುಮಾರು 24 ಗಂಟೆಗಳಾಗಿದ್ದರೂ ಫಲಿತಾಂಶ ಮಾತ್ರ ಇನ್ನೂ ಸ್ಪಷ್ಟವಾಗದೇ ಇರುವುದು ಸಾಕಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಇಂದು ಬೆಳಗ್ಗೆಯೇ ಫಲಿತಾಂಶ ಹೊರಬೀಳಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಅನಿರೀಕ್ಷಿತವಾಗಿ ಫಲಿತಾಂಶ ವಿಳಂಬವಾಗಿರುವುದನ್ನು ನೋಡಿದರೆ ಚುನಾವಣೆಯ ಸಮಗ್ರತೆಯ ಮೇಲೆ ಕಳವಳ ವ್ಯಕ್ತವಾಗಿದೆ.

    ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ವಿಶೇಷ ಕಾರ್ಯದರ್ಶಿ ಜಾಫರ್ ಇಕ್ಬಾಲ್ ಮಾತನಾಡಿ, ಚುನಾವಣಾ ಅಧಿಕಾರಿಗಳನ್ನು ಶೀಘ್ರವಾಗಿ ಫಲಿತಾಂಶಗಳನ್ನು ಬಿಡುಗಡೆ ಮಾಡಲು ಕೇಳಲಾಗಿದೆ, ಆದರೆ ಹಲವಾರು ಕಡೆ ಇಂಟರ್ನೆಟ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

    ಇಂಟರ್ನೆಟ್​ ಸಮಸ್ಯೆಗೆ ಅವಲಂಬಿತರಾಗದೇ ಸರಿಯಾದ ಸಮಯಕ್ಕೆ ಫಲಿತಾಂಶ ಪ್ರಕಟವನ್ನು ಖಚಿತಪಡಿಸುತ್ತೇವೆ ಎಂದು ಆಯೋಗ ತಿಳಿಸಿದೆ. ಆದರೆ, ಅನೇಕ ಮತಗಟ್ಟೆಗಳಲ್ಲಿ ತಮ್ಮ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗದ ಹೊಸ ಆ್ಯಪ್​ಗೆ ವರ್ಗಾವಣೆ ಮಾಡಲಾಗದೇ ಪರದಾಡುತ್ತಿದ್ದಾರೆ ಎಂದು ಪಾಕ್​ ಮಾಧ್ಯಮ ಡಾನ್​ ವರದಿ ಮಾಡಿದೆ. ಮತದಾನ ದಿನ ನಡೆದ ಬಾಂಬ್​ ದಾಳಿಯಲ್ಲಿ ಸುಮಾರು 16 ಮಂದಿ ಮೃತಪಟ್ಟು, 54 ಜನರಿಗೆ ಗಾಯಗಳಾಗಿದ್ದು, ದೇಶಾದ್ಯಂತ ಮೊಬೈಲ್​ ಸೇವೆಯನ್ನು ಸಸ್ಪೆಂಡ್​ ಮಾಡಿರುವುದು ಚುನಾವಣಾ ಫಲಿತಾಂಶದ ವಿಳಂಬಕ್ಕೆ ಕಾರಣವಾಗಿದೆ.

    ಇನ್ನು ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮೇಲೆ ದಬ್ಬಾಳಿಕೆ ನಡೆದಿದ್ದು, ರ್ಯಾಲಿಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ ಮತ್ತು ಬ್ಯಾಲೆಟ್ ಪೇಪರ್‌ನಿಂದಲೂ ಪಕ್ಷದ ಹೆಸರನ್ನು ತೆಗೆದುಹಾಕಲಾಗಿದೆ. ಹೀಗಾಗಿ ಅವರ ಪಕ್ಷದ ಎಲ್ಲ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.

    ಸದ್ಯ ಫಲಿತಾಂಶದ ಪ್ರಕಾರ, ಪಿಟಿಐ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು 46 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ನವಾಜ್​ ಶರೀಫ್​ ಅವರ ಮುಸ್ಲಿಂ ಲೀಗ್​ ನವಾಜ್​ (ಪಿಎಂಎಲ್​-ಎನ್​) 38 ಸ್ಥಾನ ಮತ್ತು ಪಾಕಿಸ್ತಾನ ಪೀಪಲ್ಸ್​ ಪಾರ್ಟಿ (ಪಿಪಿಪಿ) 31 ಸೀಟುಗಳನ್ನು ಗೆದ್ದಿದೆ. ಸ್ವತಂತ್ರವಾಗಿ ಸರ್ಕಾರವನ್ನು ರಚನೆ ಮಾಡಲು ಪಕ್ಷವೊಂದಕ್ಕೆ 134 ಸ್ಥಾನಗಳ ಅವಶ್ಯಕತೆ ಇದೆ.

    ರಾಜಕೀಯ ಅನಿಶ್ಚಿತತೆಯನ್ನು ಕಡಿಮೆ ಮಾಡುವಲ್ಲಿ ಫಲಿತಾಂಶಗಳ ಸಮಯೋಚಿತ ಪ್ರಕಟಣೆಯ ಮಹತ್ವವನ್ನು ರಾಜಕೀಯ ವಿಶ್ಲೇಷಕರು ಎತ್ತಿ ತೋರಿಸಿದ್ದಾರೆ. ವಿಶೇಷವಾಗಿ ಪಾಕಿಸ್ತಾನವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಭಯೋತ್ಪಾದಕ ಹಿಂಸಾಚಾರ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೊಸ ಸರ್ಕಾರದ ಅವಶ್ಯಕತೆ ಇದೆ. ಆದರೆ, ಫಲಿತಾಂಶ ವಿಳಂಬ ರಾಜಕೀಯ ಅನಿಶ್ಚಿತತೆ ಸೃಷ್ಟಿಸುವ ಆತಂಕವೂ ಇದೆ.

    ಚುನಾವಣಾ ಫಲಿತಾಂಶದ ಅನಿಶ್ಚಿತತೆಯ ಕಾರಣದಿಂದಾಗಿ ಕರಾಚಿಯ ಷೇರು ಸೂಚ್ಯಂಕ ಮತ್ತು ಪಾಕಿಸ್ತಾನದ ಸವರನ್​ ಬಾಂಡ್‌ಗಳು ಷೇರು ಮಾರುಕಟ್ಟೆಯಲ್ಲಿ ಕುಸಿತವನ್ನು ಅನುಭವಿಸುವುದರೊಂದಿಗೆ, ಆರ್ಥಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಇದೇ ವಿಳಂಬವೂ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಮೇಲೆ ಅನುಮಾನ ಹುಟ್ಟುಹಾಕಿದೆ. (ಏಜೆನ್ಸೀಸ್​)

    ಹೆಂಡ್ತಿ ಅದೇನ್​ ಮ್ಯಾಜಿಕ್​ ಮಾಡಿದ್ದಾಳೋ? ತಂದೆಯ ಶಾಕಿಂಗ್​ ಹೇಳಿಕೆಗೆ ಜಡ್ಡು ಉತ್ತರ ಹೀಗಿತ್ತು…

    ‘ಚಿರಂಜೀವಿ ಹೇಗೆ ಒಪ್ಪಿಕೊಳ್ತಾನೋ ಎಂದು ಭಯಯಾಗಿತ್ತು’ : ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್​ ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts