

ಹೊನ್ನಾವರ: ಹಾವುಗಳನ್ನು ಹಿಡಿಯುವಾಗ ಹಾವು ಕಚ್ಚಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉರಗತಜ್ಞ ಅಬುತಲಾ ಸೋಮವಾರ ಕಾರವಾರ ಕ್ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಾಲೂಕಿನ ಗುಂಡಬಾಳ ಸಮೀಪ ಕೆಲ ತಿಂಗಳ ಹಿಂದೆ ಮನೆಯೊಂದರಲ್ಲಿ ಆಗಮಿಸಿದ ನಾಗರಹಾವನ್ನು ಹಿಡಿಯಲು ಹೋದ ಉರಗ ತಜ್ಞನಿಗೆ ಹಾವು ಕಡಿದಿತ್ತು. ರಾತ್ರಿ ಸಮಯದಲ್ಲಿ ಮನೆಯ ಸಮೀಪ ಕಾಣಿಸಿಕೊಂಡ ನಾಗರಹಾವು ಹೊಗದೆ ಇರುದರಿಂದ ಉರಗತಜ್ಞ ಅಬು ತಲಾ ಇವರಿಗೆ ಮನೆಯವರು ಮಾಹಿತಿ ನೀಡಿದ್ದರು. ಹಾವನ್ನು ಹಿಡಿಯುವಾಗ ಅವರ ಕೈಗೆ ಹಾವು ಕಚ್ಚಿತ್ತು. ನಂತರ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.