ಬಾಂಗ್ಲಾದೇಶ ಆಟಗಾರನ ಬೌಲಿಂಗ್ ವೇಳೆ ಮೈದಾನಕ್ಕೆ ಎಂಟ್ರಿ ನೀಡಿದ ಹಾವು

ss
Published on

ಕೊಲಂಬೊ: ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಪಂದ್ಯಗಳಿಗೆ ಮಳೆ ಆಡಚಣೆ ಅಥವಾ ಬೆಳಕಿನ ಸಮಸ್ಯೆಯಿಂದಾಗಿ ಪಂದ್ಯವನ್ನು ಕೆಲ ಕಾಲ ನಿಲ್ಲಿಸಲಾಗುತ್ತದೆ. ಆದರೆ ಐಪಿಎಲ್ ಮಾದರಿಯಲ್ಲಿ ಶ್ರೀಲಂಕಾದಲ್ಲಿ ನಡೆಸಲಾಗುವ ಲಂಕಾ ಪ್ರೀಮಿಯರ್ ಲೀಗ್‌ನ ಎರಡನೇ ಲೀಗ್ ಪಂದ್ಯದ ವೇಳೆ ಮೈದಾನದಲ್ಲಿ ಹಾವು ಕಾಣಿಸಿಕೊಂಡಿದ್ದು ಆಟವನ್ನು ಕೆಲಕಾಲ ನಿಲ್ಲಿಸಲಾಗಿತ್ತು. ಹಾವು ಮೈದಾನದಲ್ಲಿ ಕಾಣಿಸಿಕೊಂಡ ವಿಡಿಯೋ ಈಗ ವೈರಲ್ ಆಗಿದೆ.

ಟೂರ್ನಿಯ ಎರಡನೇ ದಿನವಾದ ಸೋಮವಾರ ಡಂಬುಲ್ಲಾ ಹೌರಾ ಹಾಗೂ ಗಾಲೆ ಟೈಟಾನ್ಸ್ ನಡುವಿನ ಪಂದ್ಯದ ಎರಡನೇ ಇನಿಂಗ್ಸ್ ವೇಳೆ ಈ ಘಟನೆ ಸಂಭವಿಸಿದೆ. ಗಾಲೆ ಟೈಟಾನ್ಸ್ ತಂಡ ನೀಡಿದ 180 ರನ್‌ಗಳ ಗುರಿ ಬೆನ್ನತ್ತಿದ್ದ ಡಂಬುಲ್ಲಾ ಹೌರಾ ತಂಡ 4ನೇ ಓವರ್ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 27 ರನ್‌ಗಳಿಸಿತ್ತು. ಆಗ ಐದನೇ ಓವರ್ ಎಸೆಯಲು ಆಲ್ರೌಂಡರ್ ಶಕೀಬ್ ಅಲ್ ಹಸನ್ ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದಂತೆ ಏಕಾಏಕಿ ಮೈದಾನದಲ್ಲಿ ಹಾವು ಕಾಣಿಸಿಕೊಂಡಿದೆ. ಇದರಿಂದ ಪಂದ್ಯವನ್ನು ಕೆಲ ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ಬಳಿಕ ಮರು ಆರಂಭಿಸಲಾದ ಪಂದ್ಯದಲ್ಲಿ ಗಾಲೆ ಟೈಟಾನ್ಸ್ ತಂಡ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ದಾಖಲಿಸಿತು.

ಟೀಮ್ ಇಂಡಿಯಾದ ಆಟಗಾರ ದಿನೇಶ್ ಕಾರ್ತಿಕ್, ನಾಗಿನ್ ಹಿಂತಿರುಗಿದೆ, ಇದು ಬಾಂಗ್ಲಾದೇಶ ಎಂದು ತಿಳಿದುಕೊಂಡೆ ಎಂದು ಟ್ವೀಟ್ ಮಾಡುವ ಮೂಲಕ ವಿಡಿಯೋ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net