ಕೊಳದಲ್ಲಿ 50 ಸಾವಿರ ಮೌಲ್ಯದ ಮೊಬೈಲ್​ ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ಕಾದಿತ್ತು ಅಚ್ಚರಿ!

Smartphone
Published on

ಮಲಪ್ಪುರಂ: ಆಕಸ್ಮಿಕವಾಗಿ ಕೊಳವೊಂದರಲ್ಲಿ ಬಿದ್ದ 50 ಸಾವಿರ ರೂ. ಮೌಲ್ಯದ ದುಬಾರಿ ಸ್ಮಾರ್ಟ್​ಫೊನ್​ ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ಅಗ್ನಿಶಾಮಕ ಸಿಬ್ಬಂದಿ ನೆರವಾದ ಘಟನೆ ಕೇರಳದಲ್ಲಿ ನಡೆದಿದೆ.

ಕಡಂಬುಜಾ ನೆಡುವಂಚೇರಿ ನಿವಾಸಿ ಶಿಹಾಬುದೀನ್ ಗುರುವಾರ​ ತಮ್ಮ ಮನೆ ಸಮೀಪದ ಕೊಳದಲ್ಲಿ ದುಬಾರಿ ಮೊಬೈಲ್​ ಅನ್ನು ಕಳೆದುಕೊಂಡಿದ್ದರು. ಈ ವೇಳೆ ನೆರೆ ಮನೆಯವರ ಜತೆ ಸೇರಿ ಸಾಕಷ್ಟು ಹುಡುಕಾಡಿದರೂ ಮೊಬೈಲ್​ ಮಾತ್ರ ಪತ್ತೆಯಾಗಲಿಲ್ಲ. ಕೊಳವು ಸಾಕಷ್ಟು ಕೆಸರು ಮತ್ತು ಕಳೆಗಳಿಂದ ಕೂಡಿದ್ದರಿಂದ ಮೊಬೈಲ್​ ಪತ್ತೆ ಕಷ್ಟವಾಗಿತ್ತು.

ಹುಡುಕುವುದು ಸಾಧ್ಯವಿಲ್ಲ ಎಂದರಿತ ಶಿಹಾಬುದೀನ್ ಬಳಿಕ ಮಲಪ್ಪುರಂ ಅಗ್ನಿಶಾಮಕ ಸಿಬ್ಬಂದಿ ಮೊರೆ ಹೋದರು. ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಅಧಿಕಾರಿ ಪಿ ಮುಹಮ್ಮದ್​, ಶಿಬಿನ್​ ಮತ್ತು ಸರತ್​ ಕುಮಾರ್ ಸ್ಕೂಬಾ ಸೆಟ್​ ಬಳಿಸಿಕೊಂಡು​ 20 ಅಡಿ ಆಳದ ಕೊಳಕ್ಕೆ ಜಿಗಿದು ಮೊಬೈಲ್​ ಪತ್ತೆ ಮಾಡಿದರು.

ಮೊಬೈಲ್ ತುಂಬಾ ಆಧುನಿಕ ಫೀಚರ್ ಹೊಂದಿದ್ದರಿಂದ ನೀರಿಗೆ ಬಿದ್ದರೂ ಸಹ ಮೊಬೈಲ್​ಗೆ ಏನು ಆಗಿರಲಿಲ್ಲ. ಮೊಬೈಲ್​ ಮರಳಿ ಪಡೆದ ಶಿಹಾಬುದೀನ್ ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net