

ನವದೆಹಲಿ: ಇಂದು ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿ ಆರಂಭವಾಗಲಿದ್ದು, ಐದು ಪಂದ್ಯಗಳ ಟಿ20 ಟೂರ್ಗೆ ಟೀಮ್ ಇಂಡಿಯಾ ಸನ್ನದ್ಧಗೊಂಡಿದೆ. ಇನ್ನು ಭಾರತದ ಕ್ಯಾಪ್ಟನ್ ಆಗಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸುತ್ತಿದ್ದು, ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಕ್ರಿಕೆಟ್ ಪ್ರಿಯರಲ್ಲಿ ಕಾಡುತ್ತಿತ್ತು. ಈ ಹಿಂದೆಯೇ ತಿಳಿದಂತೆ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಓಪನಿಂಗ್ಗೆ ಬರಲಿದ್ದಾರೆ ಎಂದೇ ಹೇಳಲಾಗಿತ್ತು. ಆದ್ರೆ, ಆ ನಿರೀಕ್ಷೆಯನ್ನು ಇದೀಗ ಶುಭಮನ್ ತಲೆಕೆಳಗಾಗಿಸಿದ್ದಾರೆ.
ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ, ಇದೀಗ ಭಾರತದ ಮುಡಿಗೆ ಟ್ರೋಫಿಯನ್ನು ತಂದುಕೊಟ್ಟು, ಸಂಭ್ರಮದಲ್ಲಿ ತೊಡಗಿದೆ. ಇತ್ತ ಜಿಂಬಾಬ್ವೆ ಟಿ20 ಸರಣಿಗೆ ಕ್ಯಾಪ್ಟನ್ ಆಗಿರುವ ಶುಭಮನ್ ಗಿಲ್, ನಾಯಕತ್ವದ ಜವಾಬ್ದಾರಿ ಖುಷಿ ಕೊಟ್ಟಿದೆ ಹಾಗೂ ಹೇಗೆ ನಿಭಾಯಿಸಬೇಕು ಎಂಬುದನ್ನು ಅರಿತಿದ್ದೇನೆ ಎಂದಿದ್ದಾರೆ. ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಆಡಿದ ಅನುಭವ ಇಲ್ಲಿ ಮತ್ತಷ್ಟು ಬಲ ನೀಡಲಿದೆ. ಟೀಮ್ನ ಬ್ಯಾಟಿಂಗ್ ಆರ್ಡರ್ನಲ್ಲಿ ಕೊಂಚ ಬದಲಾವಣೆ ಮಾಡಿದ್ದೇವೆ ಎಂದು ಹೇಳಿದರು.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ನನ್ನೊಂದಿಗೆ ರುತುರಾಜ್ ಗಾಯಕ್ವಾಡ್ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುವುದಿಲ್ಲ. ಅವರ ಬದಲಿಗೆ ಡೆಬ್ಯೂ ಮಾಡುತ್ತಿರುವ ಅಭಿಷೇಕ್ ಶರ್ಮ ಓಪನಿಂಗ್ ಬರಲಿದ್ದಾರೆ. ಅಭಿಷೇಕ್ ಮತ್ತು ನಾನು ಜಿಂಬಾಬ್ವೆ ವಿರುದ್ಧ ಕ್ರೀಸ್ಗೆ ಬರಲು ಸಜ್ಜಾಗಿದ್ದೇವೆ. ಮೂರನೇ ಕ್ರಮಾಂಕದಲ್ಲಿ ರುತುರಾಜ್ರನ್ನು ಆಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಮೊದಲ ಟಿ20ಐ ಪಂದ್ಯ ಇಂದು ಸಂಜೆ 4 ಗಂಟೆಗೆ ಹರಾರೆ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.