SL v IND T20I ಫೈನಲ್: ಲಂಕಾ ವಿರುದ್ಧ 'ಸೂಪರ್' ಜಯ, ಭಾರತಕ್ಕೆ ಸರಣಿ

india
Published on

ಪಲ್ಲೆಕಿಲೆ: ನಾಯಕ ಸೂರ್ಯಕುಮಾರ್‌ ಯಾದವ್‌ ಮ್ಯಾಜಿಕ್‌ ಸೂಪರ್‌ ಓವರ್‌ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಶ್ರಿಲಂಕಾ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿದೆ. ಅಲ್ಲದೇ ತವರಿನಲ್ಲೇ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಸರಣಿ ಗೆದ್ದುಕೊಂಡಿದೆ.

ನಿಗದಿತ ಓವರ್​ಗಳ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಮೊರೆ ಹೋಗಲಾಯಿತು. ಟೀಂ ಇಂಡಿಯಾ ಅತ್ಯಂತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಅಲ್ಲದೆ, ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಸರಣಿಯ ಮೂಲಕ ನಾಯಕ ಸೂರ್ಯಕುಮಾರ್ ಯಾದವ್​ ಮೊದಲ ಸರಣಿಯಲ್ಲೇ ಯಶಸ್ಸು ಕಂಡರೆ, ಕೋಚ್​ ಗೌತಮ್ ಗಂಭೀರ್​ಗೂ ಶುಭಾರಂಭದ ಸಿಹಿ ದೊರೆಯಿತು.

ಪಲ್ಲೆಕಿಲೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಭಾರತ, ಮಹೀತ್ ತೀಕ್ಷಣ (28ಕ್ಕೆ3) ಹಾಗೂ ವನಿಂದು ಹಸರಂಗಾ ಸೇರಿದಂತೆ ಲಂಕಾ ಬೌಲರ್​ಗಳ ಬಿಗಿ ದಾಳಿಯ ನಡುವೆಯೂ ಗಿಲ್- ಪರಾಗ್​ ಆಸರೆಯಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಿದೆ, ಅಂತಿಮ ಐದು ಓವರ್​ಗಳಲ್ಲಿ 4 ವಿಕೆಟ್​ ಕೈ ಚೆಲ್ಲಿದ ಭಾರತ 35 ರನ್ ಮಾತ್ರ ಕಲೆಹಾಕಿತು.

ಶ್ರೀಲಂಕಾ ತಂಡ ಗೆಲುವಿಗೆ 137 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿ ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳು ಮುಗಿಯುವ ವೇಳೆ 8 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್​ ಮೊರೆ ಹೋಗಲಾಯಿತು.

ಮೊದಲು ಬ್ಯಾಟ್ ಮಾಡಿದ ಲಂಕಾ 1 ರನ್ ಬಾರಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತಮ್ಮ ಅವಕಾಶವನ್ನು ಕೊನೆಗೊಳಿಸಿತು. ಭಾರತ ಪರ ಸೂರ್ಯಕುಮಾರ್ ಮೊದಲ ಎಸೆತಕ್ಕೆ ಫೋರ್ ಬಾರಿಸಿ ಜಯ ತಂದುಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net