

ಮೂಡುಬಿದಿರೆ: ಶಿರ್ತಾಡಿಯ ಸಂಜೀವಿನಿ ಕಟ್ಟಡದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಐದು ದಿನಗಳ ಸೀರೆಗೆ ಗೊಂಡೆ ಹಾಕುವ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ತರಬೇತುದಾರೆ ಶುಭಲಕ್ಷ್ಮೀ, ಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ವ್ಯವಸ್ಥಾಪಕ ಜೀವನ್ ಕೊಲ್ಯ, ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷ ಅಗ್ನೇಶ್ ಡಿಸೋಜ, ಎನ್‌ಆರ್‌ಐಎಂ ತಾಲೂಕು ಸಂಯೋಜಕ ನಿಖಿಲ್, ತುಳಸಿ ಒಕ್ಕೂಟದ ಅಧ್ಯಕ್ಷೆ ಸವಿತಾ ಉಪಸ್ಥಿತರಿದ್ದರು. ಸುಗಂಧಿ ಸ್ವಾಗತಿಸಿದರು. ದಿವ್ಯಾ ನಿರೂಪಿಸಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಬ್ಯಾಂಕ್ ಆಫ್ ಬರೋಡಾ ಮೂಡುಬಿದಿರೆ ಶಾಖೆ, ಭಾರತೀಯ ವಿಕಾಸ ಟ್ರಸ್ಟ್, ಶಿರ್ತಾಡಿ ತುಳಸಿ ಸಂಜೀವಿನಿ ಒಕ್ಕೂಟ ಹಾಗೂ ಶಿರ್ತಾಡಿ ಗ್ರಾ.ಪಂ. ಸಹಯೋಗ ವಹಿಸಿದ್ದವು.