More

    ಸ್ಯಾನಿಟೈಸರ್​ನಿಂದ ಮದ್ಯ ತಯಾರಿ ! ಆರು ಜನರ ಬಂಧನ

    ಚೆನ್ನೈ : ಲಾಕ್​ಡೌನ್​ನಿಂದಾಗಿ ಮದ್ಯ ಮಾರಾಟ ನಿಂತಿರುವ ತಮಿಳುನಾಡಿನಲ್ಲಿ, ಯಥೇಚ್ಛವಾಗಿ ಸಿಗುತ್ತಿರುವ ಹ್ಯಾಂಡ್​ ಸ್ಯಾನಿಟೈಸರ್​​ನಿಂದ ಹೆಂಡ ತಯಾರಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಕುಡ್ಡಲೋರ್ ಜಿಲ್ಲೆಯ ರಾಮನಾಥನ್ ಕುಪ್ಪಂ ಎಂಬಲ್ಲಿ ಈ ಪ್ರಸಂಗ ನಡೆದಿದ್ದು, ಈ ಸಂಬಂಧ 6 ಜನರನ್ನು ಬಂಧಿಸಲಾಗಿದೆ.

    ನಿನ್ನೆ ಸಿಕ್ಕ ಖಚಿತ ಮಾಹಿತಿಯ ಪ್ರಕಾರ ಕುಡ್ಡಲೋರ್ ಪೊಲೀಸರು ನಡೆಸಿದ ದಾಳಿಯಲ್ಲಿ ಆರು ಜನ ಸ್ಯಾನಿಟೈಸರ್​​ನಿಂದ ಅಕ್ರಮವಾಗಿ ಆಲ್ಕೊಹಾಲ್ ಉತ್ಪಾದಿಸುವ ಪ್ರಯತ್ನದಲ್ಲಿದ್ದುದು ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯವರ ತಪಾಸಣೆಯ ನಂತರ ಆರೋಪಿಗಳು ಉಪಯೋಗಿಸುತ್ತಿದ್ದ ಕಚ್ಚಾ ಸಾಮಗ್ರಿ ಸ್ಯಾನಿಟೈಸರೇ ಎಂದು ಖಾತ್ರಿಯಾಗಿದೆ.

    ಇದನ್ನೂ ಓದಿ: ಟೆಸ್ಟಿಂಗ್ ಕಡಿಮೆ ಮಾಡಲು ಯಾವುದೇ ಆದೇಶ ಹೊರಡಿಸಿಲ್ಲ : ಸಚಿವ ಅಶೋಕ್

    ಆರೋಪಿಗಳಿಂದ 300 ಲೀಟರ್ ಹ್ಯಾಂಡ್​ ಸ್ಯಾನಿಟೈಸರ್​, ಖಾಲಿ ಬಾಟಲಿಗಳು ಮತ್ತು ಒಂದು ಟಾಟಾ ಏಸ್​ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ತಮಿಳುನಾಡು ಸರ್ಕಾರ ಮೇ 24 ರವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ ವಿಧಿಸಿದ್ದು, ಟಾಸ್ಮಾಕ್ ಎಂದು ಕರೆಯಲ್ಪಡುವ ಸರ್ಕಾರಿ ಮದ್ಯದಂಗಡಿಗಳೂ ಮುಚ್ಚಲ್ಪಟ್ಟಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಚಿಂಕಾರ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರ ಬಂಧನ

    ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts