

ಗದಗ: ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಹೃದಯಾಘಾತದಿಂದ ಸಾವಿಗೀಡಾದ ಕರುಣಾಜನಕ ಪ್ರಕರಣವೊಂದು ನಡೆದಿದೆ. ಗದಗ ಜಿಲ್ಲೆಯಲ್ಲಿ ಇಂಥದ್ದೊಂದು ದುರ್ಘಟನೆ ಸಂಭವಿಸಿದೆ.
ನರಗುಂದ ಪಟ್ಟಣದ ಕಸಬಾ ಓಣಿ ನಿವಾಸಿ ಈರಪ್ಪ ಬೆಳವಣಿಕಿ (65), ಬಾಳವ್ವ ಸಿದ್ನಾಳ (80) ಸಾವಿಗೀಡಾದ ತಮ್ಮ ಹಾಗೂ ಅಕ್ಕ. ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಅನಾರೋಗ್ಯಕ್ಕೆ ಒಳಗಾಗಿದ್ದ ಈರಪ್ಪ ಸಾವಿಗೀಡಾಗಿದ್ದು, ಅವರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತಮ್ಮನ ಅಂತಿಮ ದರ್ಶನಕ್ಕೆ ಬಂದಿದ್ದ ಅಕ್ಕ ಬಾಳವ್ವ, ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ.
ತಮ್ಮನ ಅಂತ್ಯಸಂಸ್ಕಾರವನ್ನು ನರಗುಂದ ಪಟ್ಟಣದ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ. ಸಹೋದರಿ ಬಾಳವ್ವ ಸಿದ್ನಾಳ ಅವರ ಶವವನ್ನ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮಕ್ಕೆ ಕೊಂಡೊಯ್ಯಲಾಗಿದೆ.