

ಪುತ್ತೂರು: ಏಕ ನಿವೇಶನ ವಿನ್ಯಾಸಕ್ಕೆ ಯೋಜನಾ ಅಭಿವೃದ್ಧಿ ಪ್ರಾಽಕಾರದಿಂದ ಅನುಮತಿ ಪಡೆದುಕೊಳ್ಳಬೇಕೆಂಬ ಆದೇಶದಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕರಾವಳಿ ಭಾಗದ ಎಲ್ಲ ಶಾಸಕರು ಹಾಗೂ ಪ್ರಮುಖರು ಸೇರಿ ಸಭೆ ನಡೆಸಿ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗಿತ್ತು. ಈಗ ಪ್ರತಿ ತಾಲೂಕಿಗೆ ಪ್ರಾಽಕಾರದ ಸದಸ್ಯರನ್ನು ಕಳುಹಿಸಿ ಅಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ೯/೧೧ಗೆ ಅನುಮೋದನೆ ನೀಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿದೆ. ಅಽಕಾರಿಗಳು ಸ್ಥಳೀಯ ಮಟ್ಟಕ್ಕೆ ಹೋಗಿ ೧೨ರಿಂದ ೧೫ ದಿನದ ಒಳಗೆ ಅನುಮೋದನೆ ಕೊಡಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ತಾಲೂಕು ಆಡಳಿತದ ಸಭಾಂಗಣದಲ್ಲಿ ಏಕ ನಿವೇಶನ ವಿನ್ಯಾಸ ಅನುಮೋದನೆ ವಿಚಾರದಲ್ಲಿ ನಗರಾಭಿವೃದ್ಧಿ ಪ್ರಾಽಕಾರದ ಆಯುಕ್ತರ ಹಾಗೂ ವಿವಿಧ ತಾಲೂಕು ಮಟ್ಟದ ಅಽಕಾರಿಗಳ ಸಭೆ ನಡೆಸಿ ಮಾತನಾಡಿದರು.
ಸ್ಥಳೀಯ ಪಂಚಾಯಿತಿ ೯/೧೧ ಮಾಡುವುದಕ್ಕೆ ಅರ್ಜಿ ಸ್ವೀಕಾರ ಮಾಡಿ, ಅಲ್ಲಿಂದ ಸ್ಥಳೀಯ ಪ್ರಾಽಕಾರಕ್ಕೆ ಕಳುಹಿಸಿಕೊಡಬೇಕಾಗಿದೆ. ಬೆಳ್ತಂಗಡಿಯವರು ಮೂಡುಬಿದರೆ ಪ್ರಾಽಕಾರ, ಸುಳ್ಯ- ಕಡಬ-ವಿಟ್ಲ ಪಟ್ಟಣ ಪಂಚಾಯಿತಿಯವರು ಪುತ್ತೂರು ಪ್ರಾಽಕಾರವನ್ನು ಬಳಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸ್ವಂತ ಜಾಗದಲ್ಲಿ ಮನೆ ಕಟ್ಟಲು ೨೫ ಸೆಂಟ್ಸ್ ಒಳಗಿನ ಭೂಪರಿವರ್ತನೆಗೆ ೯/೧೧ ಮಾಡುವ ಸಂದರ್ಭದ ರಸ್ತೆಯ ಜಾಗ ದಾನಪತ್ರ ಕೇಳುವಂತಿಲ್ಲ ಮತ್ತು ಪಂಚಾಯಿತಿಯಿಂದ ಎನ್.ಒ.ಸಿ. ಕೇಳುವತಿಲ್ಲ. ಕಟ್ ಕನ್ವರ್ಷನ್ ವಿಚಾರದಲ್ಲಿ ೩೦ ಅಡಿ ರಸ್ತೆಯನ್ನು ಬಿಟ್ಟು ಆ ಬಳಿಕ ಅಭಿವೃದ್ಧಿಗೆ ಬೇಕಾದ ವ್ಯವಸ್ಥೆಯನ್ನು ನೀಡುವ ಕಾರ್ಯ ಕೆಲವೇ ದಿನದಲ್ಲಿ ಸರ್ಕಾರ ಮಾಡಲಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಽಕಾರದ ಆಯುಕ್ತ ವೆಂಕಟ ಚಲಪತಿ ಮಾತನಾಡಿ, ಒತ್ತಡ ಇರುವ ತಾಲೂಕಿಗೆ ಹೆಚ್ಚಿನ ಸಮಯವನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ದಾಖಲೆಗಳ ಸಮಸ್ಯೆ ಹಾಗೂ ಪರಿಹಾರದ ವಿಚಾರದಲ್ಲಿ ಡಿಡಿ ಹಾಗೂ ಜೆಡಿ ನಿತ್ಯ ಪರಿಶೀಲನೆ ನಡೆಸುತ್ತಾರೆ. ಸ್ವಂತ ಬಳಕೆಯ ೯/೧೧ ವಿಚಾರದಲ್ಲಿ ೧ಎಕರೆಯ ಕೆಳಗೆ ಸ್ಥಳೀಯ ಪ್ರಾಽಕಾರದಲ್ಲಿ ಅನುಮೋದನೆ ನೀಡಲು ಅವಕಾಶವಿದೆ. ೨ಎಕರೆವರೆಗೆ ಮಹಾನಗರ ಪ್ರಾಽಕಾರ, ೫ ಎಕರೆವರೆಗೆ ಮೈಸೂರು ಡಿವಿಜನ್, ಅದರ ಮೇಲಿನದ್ದು ಆಯುಕ್ತರ ಕಚೇರಿಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕಾಗಿದೆ. ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಮೈಸೂರು ವಿಭಾಗ ಜಂಟಿ ನಿರ್ದೇಶಕಿ ಪಂಕಜ, ಡಿ.ಡಿ. ಹನುಮಂತಪ್ಪ, ತಹಸೀಲ್ದಾರ್ ಪುರಂದರ ಹೆಗ್ಡೆ, ಪುತ್ತೂರು ಯೋಜನಾ ಪ್ರಾಽಕಾರ ಸದಸ್ಯ ಕಾರ್ಯದರ್ಶಿ ಅಭಿಲಾಷ್, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ವಿವಿಧ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಽಕಾರಿಗಳಾದ ನವೀನ್ ಭಂಡಾರಿ, ರಾಜಣ್ಣ, ಭವಾನಿ ಶಂಕರ್, ಸಚಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.