

ಮುಂಬೈ: ಜನಪ್ರಿಯ ಪಂಜಾಬಿ-ಕೆನಡಾದ ಗಾಯಕ ಮತ್ತು ರಾಪರ್ ಎಪಿ ಧಿಲ್ಲೋನ್ ಅವರು ತಮ್ಮ ಅದ್ಭುತ ಗೀತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ಬನಿತಾ ಸಂಧು ಅವರೊಂದಿಗೆ ಧಿಲ್ಲೋನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಎಲ್ಲೆಡೆ ಹಬ್ಬಿತ್ತು. ಇದಕ್ಕೂ ಮುನ್ನ ಶ್ರೀದೇವಿ ಪುತ್ರಿ ಖುಷಿ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಪ್ರಸ್ತುತ ಎಪಿ ಧಿಲ್ಲೋನ್ ಅಥವಾ ಬನಿತಾ ಈ ವದಂತಿಗಳು ಅಥವಾ ಊಹಾಪೋಹಗಳಿಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಅಂದಹಾಗೆ ಧಿಲ್ಲೋನ್ ತಮ್ಮ ಮುಂಬರುವ 'ಎಪಿ ಧಿಲ್ಲೋನ್: ಫಸ್ಟ್ ಆಫ್ ಎ ಕೈಂಡ್' ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರಕ್ಕಾಗಿ ಪ್ರಸ್ತುತ ಭಾರತದಲ್ಲಿದ್ದಾರೆ. ಆದರೆ ಇದೀಗ ನೆಟ್ಟಿಗರು ಧಿಲ್ಲೋನ್ ವಿರುದ್ಧ ಕಿಡಿಕಾರಿದ್ದಾರೆ. ಯಾಕೆ ಅಂತೀರಾ...?, ನಮ್ಮ ರಾಷ್ಟ್ರಧ್ವಜ ತ್ರಿವರ್ಣವನ್ನು ಹೋಲುವ ಕ್ರೀಡಾ ಶೂಗಳನ್ನು ಧಿಲ್ಲೋನ್ ಧರಿಸಿದ್ದಾರೆ.
ಧಿಲ್ಲೋನ್ ಗೆಳತಿ ಬನಿತಾ ಸಂಧು ಅವರ ಹೊಸ ಹಾಡಿನ 'ವಿತ್ ಯು' ಅನ್ನು ಪ್ರಚಾರ ಮಾಡಲು ಇನ್ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ತ್ರಿವರ್ಣವನ್ನು ಹೋಲುವ ಶೂ ಧರಿಸಿರುವುದನ್ನು ಕಾಣಬಹುದು.
ಆದರೆ ಯಾವಾಗ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರೊ ಆಗ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. "ಭಾರತೀಯ ಧ್ವಜವನ್ನು ಯಾವುದೇ ವ್ಯಕ್ತಿ ಸೊಂಟದ ಕೆಳಗೆ ಧರಿಸಲು ಪರಿಕರವಾಗಿ ಬಳಸಲಾಗುವುದಿಲ್ಲ'' ಎಂದು ನೆಟ್ಟಿಗರಲ್ಲಿ ಒಬ್ಬರು ಸೂಚಿಸಿದ್ದಾರೆ.
ನೆಟ್ಟಿಗರ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ ನೋಡಿ....