

ಸಿಂಗಾಪುರ : ವ್ಯಕ್ತಿಯೊಬ್ಬ ಕ್ಯಾಸಿನೋ ಒಂದರಲ್ಲಿ ಬರೋಬ್ಬರಿ 4 ಮಿಲಿಯನ್ ಡಾಲರ್ (33,38,19,200) ಜಾಕ್ ಪಾಟ್ ಹೊಡೆದಿದ್ದು, ಜಾಕ್ ಪಾಟ್ ಗೆದ್ದ ವಿಪರೀತ ಖುಷಿಯಲ್ಲಿ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಿಂಗಾಪುರದ ಮರೀನಾ ಬೇ ಕ್ಯಾಸಿನೋದಲ್ಲಿ ನಡೆದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕ್ಯಾಸಿನೋದಲ್ಲಿ ಲಾಟರಿ ಗೆದ್ದ ಖುಷಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಸುತ್ತ ಕುಳಿತ ಕುಟುಂಬಸ್ಥರು ದಯವಿಟ್ಟು ಎದ್ದು ಬನ್ನಿ ಎಂದು ಜೋರಾಗಿ ಅಳುತ್ತಿರುವ ದೃಶ್ಯವನ್ನು ಕಾಣಬಹುದು.
ಕ್ಯಾಸಿನೊ ಜೂಜಿನಲ್ಲಿ ಬರೋಬ್ಬರಿ 4 ಮಿಲಿಯನ್ ಡಾಲರ್ ಗೆದ್ದ ವ್ಯಕ್ತಿಯೊಬ್ಬರು, ಜಾಕ್ ಪಾಟ್ ಹೊಡೆದ ವಿಪರೀತ ಖುಷಿಯಲ್ಲಿ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು @Osint613 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮರೀನಾ ಬೇ ಸಿಂಗಾಪುರ್ ಕ್ಯಾಸಿನೋದಲ್ಲಿ ವ್ಯಕ್ತಿಯೊಬ್ಬರು 4 ಮಿಲಿಯನ್ ಡಾಲರ್ ಗೆದ್ದ ಖುಷಿಯಲ್ಲಿ ಹೃದಯಾಘಾತದಿಂದ ನಿಧನರಾದರು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.