ನ.8,9ಕ್ಕೆ ಸಿಂಧೂರ ನಮನ ಕಾರ್ಯಕ್ರಮ; ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ಆಯೋಜನೆ

Published on

ಬೆಂಗಳೂರು: ಶ್ರೀ ಅಕಾಡೆಮಿ ಆ್ ಮ್ಯೂಸಿಕ್ ಅಂಡ್ ಆರ್ಟ್ಸ್ (ಸಾಮ) ಸಂಸ್ಥೆ ಆಯೋಜಿಸಿರುವ ಸಿಂಧೂರ ನಮನ ಕಾರ್ಯಕ್ರಮವು ನ.8 ಮತ್ತು 9ಕ್ಕೆ ನಡೆಯಲಿದೆ. ಈ ಬಾರಿಯ ಸಂಗೀತ ಉತ್ಸವವನ್ನು ಭಾರತದ ರಕ್ಷಣಾ ಪಡೆಗಳಿಗೆ ಸಮರ್ಪಿಸಲಾಗಿದೆ.

ಜಯನಗರದ ಶ್ರೀಜಯರಾಮ ಸೇವಾ ಮಂಡಳಿಯಲ್ಲಿ ನಡೆಯಲಿರುವ ಎರಡು ದಿನಗಳ ಕಾರ್ಯಕ್ರಮದಲ್ಲಿ ನಾಡಿನ ಹಲವು ಖ್ಯಾತನಾಮ ವಿದ್ವಾಂಸರ ಸಂಗೀತ ಕಚೇರಿ, ವೇದ ವಿದ್ವಾಂಸರ ವೇದ ಪಾರಾಯಣ, ಹಾಸ್ಯ ದಿಗ್ಗಜರ ಹಾಸ್ಯ ಸಂವಾದ, ವಿದ್ಯಾರ್ಥಿಗಳಿಂದಲ ನೃತ್ಯ ಪ್ರದರ್ಶನ ನಡೆಯಲಿದೆ. ಇದೇ ವೇಳೆ ವೀರ ನಾರಿಯರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸಾಮ ಪುರಸ್ಕಾರ, ಸಾಮ ಯುವ ಪುರಸ್ಕಾರ, ಸಾಮ ಬಾಲ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net