More

    ಏಷ್ಯನ್ ಗೇಮ್ಸ್ ಪ್ರಿ ಕ್ವಾರ್ಟರ್‌ಫೈನಲ್‌ಗೇರಿದ ಸಿಂಧು, ಪ್ರಣಯ್

    ಹಾಂಗ್‌ರೆೌ: ಭಾರತದ ಅಗ್ರ ಷಟ್ಲರ್‌ಗಳಾದ ಎಚ್‌ಎಸ್ ಪ್ರಣಯ್, ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಬ್ಯಾಡ್ಮಿಂಟನ್ ಸ್ಪರ್ಧೆಯ ವೈಯಕ್ತಿಕ ಸಿಂಗಲ್ಸ್ ವಿಭಾಗದಲ್ಲಿ ನೇರಗೇಮ್‌ಗಳ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ೈನಲ್‌ಗೇರಿದ್ದಾರೆ.
    ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.7 ಪ್ರಣಯ್ 21-9, 21-12 ರಿಂದ ಮಂಗೋಲಿಯಾದ ಬಟ್ಡಾವಾ ಮುಂಖ್‌ಬಾತ್ ಎದುರು ಕೇವಲ 25 ನಿಮಿಷದಲ್ಲಿ ಗೆಲುವು ದಾಖಲಿಸಿದರು. ಬೆನ್ನು ನೋವಿನಿಂದ ಚೀನಾ ವಿರುದ್ಧದ ತಂಡ ವಿಭಾಗದ ೈನಲ್ ಪಂದ್ಯದಿಂದ ಹೊರಗುಳಿದಿದ್ದ ಪ್ರಣಯ್ ಕಂಬ್ಯಾಕ್ ಮಾಡಿದರು. ಕಿಡಂಬಿ ಶ್ರೀಕಾಂತ್ 21-16, 21-11ರಿಂದ ಕೊರಿಯಾದ ಕೊರಿಯಾದ ಲೀ ಯುನ್ ಗ್ಯೂ ಎದುರು ಸುಲಭ ಗೆಲುವು ದಾಖಲಿಸಿದರು. 16ರ ಘಟ್ಟದಲ್ಲಿ 2ನೇ ಶ್ರೇಯಾಂಕಿತ ಜಪಾನ್ ಕೊಡೈ ನರೋಕಾ ವಿರುದ್ಧ ಸೆಣಸಲಿದ್ದಾರೆ.
    ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು 21-10,21-15ರಿಂದ ವಿಶ್ವ ನಂ. 21 ಚೀನಾ ತೈಪೆಯ ವೀ ಚಿ ಹ್ಸು ವಿರುದ್ಧ ನಿರಾಯಾಸ ಜಯ ಕಂಡರು. ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾದ ಪುತ್ರಿ ಕುಸುಮ ವಾರ್ಧನಿ ಅವರನ್ನು ಎದುರಿಸಲಿದ್ದಾರೆ.
    ಕಾಮನ್ವೆಲ್ತ್ ಗೇಮ್ಸ್ ಕಂಚು ವಿಜೇತ ಜೋಡಿ ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್ 21-14, 21-12ರಿಂದ ಅಮಿನಾಥ್ ನಬೀಹಾ -ಫಾತಿಮತ್ ನಬಾಹಾ ಜೋಡಿಯನ್ನು ಮಣಿಸಿದರು. ಕನ್ನಡತಿ ಅಶ್ವಿನಿ ಪೊನ್ನಪ್ಪ -ತನೀಷಾ ಕ್ರಾಸ್ಟೋ ಜೋಡಿ ಮೊದಲ ಸುತ್ತಿನಲ್ಲಿ ವಾಕ್ ಓವರ್ ಪಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts