

ಸಿಂಧನೂರು : ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಸೋಮವಾರ ಪ್ರತಿಭಟನೆ ನಡೆಸಿತು.
ದೇಶದ 112 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ, ರಾಯಚೂರು ಮತ್ತು ಯಾದಗಿರಿ ಜಿಲ್ಲೆ ಮಹತ್ವಾಕಾಂಕ್ಷಿ ಜಿಲ್ಲೆಯಲ್ಲಿ ಬರುತ್ತವೆ. ಕಳೆದ 76 ವರ್ಷಗಳಿಂದ ಜಿಲ್ಲೆಗೆ ಮಹತ್ವಾಕಾಂಕ್ಷಿ ಯೋಜನೆಗಳು ಜಾರಿಯಾಗಿಲ್ಲ. ರಾಜ್ಯ ಸರ್ಕಾರ ಪ್ರಾದೇಶಿಕ ಅಸಮತೋಲನೆ ಹೋಗಲಾಡಿಸಲು ನಂಜುಂಡಪ್ಪ ಆಯೋಗ ರಚಿಸಲಾಯಿತು. ಈ ವರದಿಯಂತೆ ಬೇರೆ ಬೇರೆ ಬೇಡಿಕೆಯಂತೆ ಜಿಲ್ಲೆಗೆ ಐಐಟಿ ಕೊಡಬೇಕೆಂದು ತಿಳಿಸಲಾಗಿತ್ತು. ಆದರೆ ರಾಯಚೂರಿನಲ್ಲಿ ಐಐಟಿ ಹೋರಾಟ ಸಮಿತಿ ಒಳಗೊಂಡು ಹಲವು ಸಂಘ ಸಂಸ್ಥೆಗಳು ಕೂಡ ಐಐಟಿಯನ್ನು ಪಡೆಯಲು ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ರಾಜಕೀಯ ಬಲದಿಂದ ಧಾರವಾಡಕ್ಕೆ ಮಂಜೂರು ಮಾಡಲಾಯಿತು. ಜಿಲ್ಲೆಗೆ ಪದೇ ಪದೆ ಇದೇ ಅನ್ಯಾಯ ನಡೆಯುತ್ತಿದ್ದು ವಂಚನೆ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಕಾಳಜಿ ವಹಿಸಿ ಏಮ್ಸ್ ಮಂಜೂರು ಮಾಡಲು ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ಹೋರಾಟದ ಸ್ವರೂಪ ಬದಲಾಗಿದ್ದು, ಸರ್ಕಾರಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಲಾಯಿತು.
ಪ್ರಮುಖರಾದ ನಬಿಸಾಬ, ಪರಶುರಾಮ ಗೀತಾಕ್ಯಾಂಪ್, ಯುವ ಘಟಕದ ದ್ಯಾವಪ್ಪ ನಾಯಕ, ವಿಘ್ನೇಶ್ವರ, ರವಿ, ಆಂಜನೇಯ ಇತರರಿದ್ದರು.