

ಸುಳ್ಯ: ಅಕಾಡೆಮಿ ಆ್ ಲಿಬರಲ್ ಎಜುಕೇಶನ್ ‘ಕಮಿಟಿ ಬಿ’ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀ ಮಲ್ಲಿಕಾರ್ಜುನ ದೇವರ ಮೂಲ ಅಂಗಕ್ಕೆ ಚಿನ್ನದ ತ್ರಿನೇತ್ರ ಸಹಿತ ಬೆಳ್ಳಿಯ ಕವಚವನ್ನು ಮಂಗಳವಾರ ಸಮರ್ಪಣೆ ಮಾಡಿದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಡಾ.ರೇಣುಕಾ ಪ್ರಸಾದ್ ಕೆ.ವಿ., ಪತ್ನಿ ಡಾ.ಜ್ಯೋತಿ ಆರ್.ಪ್ರಸಾದ್, ಮಕ್ಕಳಾದ ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ ಕವಚ ಸಮರ್ಪಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಪ್ರಮುಖರಾದ ಎನ್.ಎ.ರಾಮಚಂದ್ರ, ನಿತ್ಯಾನಂದ ಮುಂಡೋಡಿ, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎಸ್.ಎನ್.ಮನ್ಮಥ, ಜಾಕೆ ಮಾಧವ ಗೌಡ, ಪಿ.ಸಿ.ಜಯರಾಮ, ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ಪಿ.ಬಿ.ಸುಧಾಕರ ರೈ, ಎಂ.ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ಯಶೋದಾ ರಾಮಚಂದ್ರ, ಕಿಶೋರ್ ಕುಮಾರ್ ಉಳುಮಾರು, ಸಂತೋಷ್ ಕುತ್ತಮೊಟ್ಟೆ, ಕೇಶವ ಅಡ್ತಲೆ, ಅಶೋಕ್ ಪೀಚೆ, ಭವಾನಿಶಂಕರ ಅಡ್ತಲೆ, ದಿನೇಶ್ ಮಡ್ತಿಲ, ಶಿವರಾಮ ಕೇರ್ಪಳ, ಸೋಮಶೇಖರ್ ಪೈಕ, ವಸಂತ ಕಿರಿಭಾಗ, ಕುಶಾಲಪ್ಪ ಪೆರುವಾಜೆ, ಎಸ್.ಆರ್.ಸೂರಯ್ಯ, ಕೆ.ಸಿ.ಸದಾನಂದ, ಧನಂಜಯ ಕಲ್ಲುಗದ್ದೆ, ಮುಗುಪ್ಪು ಕೂಸಪ್ಪ ಗೌಡ, ಬೂಡು ರಾಧಾಕೃಷ್ಣ ರೈ, ವಾರಿಜಾ ಕುರುಂಜಿ, ಗಿರೀಶ ಕಲ್ಲುಗದ್ದೆ, ಎನ್.ಎ.ಜಿತೇಂದ್ರ, ನಾರಾಯಣ ಕೇಕಡ್ಕ, ಸುನೀಲ್ ಕೇರ್ಪಳ, ಮೋಹನ್ ರಾಂ ಸುಳ್ಳಿ, ಡಾ.ಮನೋಜ್ ಅಡ್ಡಂತ್ತಡ್ಕ, ಡಾ.ರೇವಂತ್, ಕಮಲಾಕ್ಷ ನಂಗಾರು, ದೊಡ್ಡಣ್ಣ ಬರೆಮೇಲು, ದಯಾನಂದ ಕುರುಂಜಿ, ಭಾರತಿ ಪುರುಷೋತ್ತಮ, ಗೀತಾ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.