ಮದುವೆಯಲ್ಲಿ ರಾಯಲ್​​​ ಲುಕ್​​; ವಧು, ವರರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮುತ್ತು, ರತ್ನಗಳೊಂದಿಗೆ ಬೆಳ್ಳಿ ಚಪ್ಪಲಿ!

silversandals
Published on

ಉತ್ತರಪ್ರದೇಶ: ಮದುವೆ ಎಂದರೆ ಯುವಕ, ಯುವತಿಯರಿಗೆ ಕನಸು ಹೆಚ್ಚು. ಊಟಾ, ಬಟ್ಟೆ, ಮೇಕಪ್​​ನಿಂದ ಹಿಡಿದು ಪ್ರತಿಯೊಂದನ್ನು ವಿಶೇಷ ಮತ್ತು ವಿಭಿನ್ನತೆಯನ್ನು ನೋಡುತ್ತಾರೆ. ಹೀಗೆ ವಿಭಿನ್ನತೆ ನೋಡುವವರಿಗೆ ಮುತ್ತು ಹಾಗೂ ರತ್ನಗಳಿಂದ ಮಾಡಿರುವ ಬೆಳ್ಳಿ ತಪ್ಪಲಿ ಕೂಡಾ ಮಾರುಕಟ್ಟೆಗೆ ಬಂದಿದೆ. ವಿವಿಧ ಮಾದರಿಯ ಬೆಳ್ಳಿಯ ಚಪ್ಪಲಿಗಳು ವಧುವಿನ ಮದುವೆಯ ಸ್ಯಾಂಡಲ್‌ಗಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

silversandals

ಯುಪಿಯ ಲಕ್ನೋದಲ್ಲಿ ಆಭರಣ ವ್ಯಾಪಾರಿಯೊಬ್ಬರು 300 ರಿಂದ 500 ಗ್ರಾಂ ಬೆಳ್ಳಿಯಿಂದ ಚಪ್ಪಲಿಯನ್ನು ತಯಾರಿಸಿದ್ದಾರೆ. ಈ ಚಪ್ಪಲಿಗಳ ಬೆಲೆ ಬೆಳ್ಳಿ, ಚಪ್ಪಲಿಗಳ ವಿನ್ಯಾಸಕ್ಕೆ ಬಳಸುವ ಮುತ್ತು, ರತ್ನಗಳ ಆಧಾರದ ಮೇಲೆ ಅವುಗಳ ಮೌಲ್ಯ ಹೆಚ್ಚುತ್ತದೆ.ಈ ಚಪ್ಪಲಿಗಳ ಬೆಲೆ 25,000 ರೂ.ಗಳಿಂದ ಆರಂಭವಾಗುತ್ತದೆ ಎನ್ನುತ್ತಾರೆ ತಯಾರಕರು.

ಕೆಲವರು ಅವರ ಅಂಗಡಿಗೆ ಬಂದು ಬೆಳ್ಳಿ ಚಪ್ಪಲಿ ಬಗ್ಗೆ ಕೇಳುತ್ತಾರೆ. ಇದೀಗ ಮದುವೆ ಸೀಸನ್ ನಡೆಯುತ್ತಿರುವುದರಿಂದ ವಧು-ವರರಿಗೆ ಚಪ್ಪಲಿ ತಯಾರಿಸಿ ಆರ್ಡರ್ ಪ್ರಕಾರ ಅವರವರ ಅಳತೆಗೆ ತಕ್ಕಂತೆ ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಆಭರಣ ಮಳಿಗೆಯ ಮಾಲೀಕ ವಿನೋದ್ ಮಹೇಶ್ವರಿ. ವಧು-ವರರಿಗೆ ಮಾತ್ರವಲ್ಲದೆ ಮಕ್ಕಳಿಗೂ ಬೆಳ್ಳಿಯ ಚಪ್ಪಲಿಯನ್ನು ತಯಾರಿಸುತ್ತಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೆಚ್ಚು ಬೆಲೆಬಾಳುವ ವಸ್ತುಗಳನ್ನು ಬಳಸುತ್ತಾರೆ. ಅವರು ತೊಡುವ ಚಪ್ಪಲಿ, ಬೂಟುಗಳು ಲಕ್ಷಗಟ್ಟಲೆ ಬೆಲೆಬಾಳುತ್ತವೆ.ಆದರೆ ಬೆಳ್ಳಿಯಿಂದ ಮಾಡಿದ ಪಾದರಕ್ಷೆ ಸ್ವಲ್ಪ ಭಿನ್ನ. ಉತ್ತರ ಪ್ರದೇಶದ ಲಕ್ಷ ನವೂ ಎಂಬಲ್ಲಿ ಆಭರಣ ವ್ಯಾಪಾರಿಯೊಬ್ಬರು ಬೆಳ್ಳಿಯ ಚಪ್ಪಲಿಗಳನ್ನು ತಯಾರಿಸುತ್ತಾರೆ. ವಧು ಮತ್ತು ವರರಿಗೆ ವಿಭಿನ್ನ ವಿನ್ಯಾಸಗಳೊಂದಿಗೆ ಸ್ಯಾಂಡಲ್‌ಗಳನ್ನು ತಯಾರಿಸಲಾಗುತ್ತದೆ.

silversandals

ಇತ್ತೀಚಿನ ದಿನಗಳಲ್ಲಿ ವರನು ಶೇರ್ವಾನಿಗಳನ್ನು ಧರಿಸುವುದು ಸಾಮಾನ್ಯವಾಗಿದೆ. ವರ ಧರಿಸುವ ಬೆಲ್ಟ್ ಗಳನ್ನೂ ಬೆಳ್ಳಿಯಿಂದಲೇ ಶೇರ್ವಾನಿಗೆ ಸೂಕ್ತ ಮಾದರಿಯಲ್ಲಿ ಮಾಡಲಾಗಿದೆ. ಇವುಗಳನ್ನು ಚಪ್ಪಲಿಗಳ ಮೇಲೆ ಮುತ್ತುಗಳು ಮತ್ತು ರತ್ನಗಳಿಂದ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಆಕರ್ಷಕವಾಗಿ ಕಾಣುವುದರಿಂದ ಅನೇಕರು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಅಂಗಡಿ ಮಾಲೀಕರು. 100 ರಿಂದ 500 ಗ್ರಾಂ ತೂಕದ ಈ ಪಾದರಕ್ಷೆಗಳ ಬೆಲೆ ರೂ. 25 ಸಾವಿರಕ್ಕೆ ಮಾರಾಟವಾಗುತ್ತಿದೆ. ಅದೇನೇ ಇರಲಿ, ಶೇರ್ವಾನಿಯಲ್ಲಿ ಬೆಳ್ಳಿಯ ಚಪ್ಪಲಿ ತೊಟ್ಟರೆ ರಾಯಲ್ ಲುಕ್ ಬೇರೆಯೇ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net