ವಾಲಿಬಾಲ್‌ನಲ್ಲಿ ಬೆಳ್ಳಿ ಪದಕ : ವಿದ್ಯಾರ್ಥಿಗಳಿಗೆ ಮುಂಡಾಜೆಯಲ್ಲಿ ಭವ್ಯ ಸ್ವಾಗತ

New Project (26)
Published on

ಬೆಳ್ತಂಗಡಿ: ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ 68ನೇ ರಾಷ್ಟ್ರೀಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗಳಿಸಿದ ತಂಡದ ಸದಸ್ಯರಾದ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತದ ಮೂಲಕ ಅಭಿನಂದಿಸಲಾಯಿತು.

ವಿದ್ಯಾರ್ಥಿಗಳು ವಿಜಯವಾಡದಿಂದ ಆಗಮಿಸಿದ ಸಂದರ್ಭ ಸೋಮವಾರ ಉಜಿರೆಯಿಂದ ವಾಹನಗಳ ಭವ್ಯ ಮೆರವಣಿಗೆ ಮೂಲಕ ಮುಂಡಾಜೆಗೆ ಕರೆತರಲಾಯಿತು. ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನಯಚಂದ್ರ, ಕಾರ್ಯದರ್ಶಿ ನಾರಾಯಣ ಗೌಡ, ಸಂಚಾಲಕ ನಾರಾಯಣ ಫಡಕೆ, ಮುಂಡಾಜೆ ಪಂಚಾಯಿತಿ ಅಧ್ಯಕ್ಷ ಗಣೇಶ ಬಂಗೇರ, ಉಪಾಧ್ಯಕ್ಷೆ ಸುಮಲತಾ, ಪಿಡಿಒ ಗಾಯತ್ರಿ, ಕಾಲೇಜಿನ ವೈಸ್‌ಪ್ರಿನ್ಸಿಪಾಲ್ ಗೀತಾ, ಉಪನ್ಯಾಸಕ ವೃಂದದವರು, ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ ಎಂ.ಎಸ್., ಸಂದೀಪ್ ಶೆಟ್ಟಿ, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಲಾವಿದ ಜಯರಾಮ ಕೆ. ವಿದ್ಯಾರ್ಥಿಗಳ ಸಾಧನೆ ಕುರಿತು ಮಾತನಾಡಿದರು. ಮುಂಡಾಜೆಯ ವಿರಾಟ್ ಹಿಂದೂ ಸೇವಾ ಸಂಘ ಸಹಕರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net