ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಠ್ಯ ಜತೆಗೆ ಭವಿಷ್ಯದ ಬದುಕು ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕು. ವಿದ್ಯಾರ್ಥಿಗಳು ಶಿಕ್ಷಣ ಬಳಿಕ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದರೂ, ತಂದೆ ತಾಯಿಗೆ ಗೌರವ ಹಾಗೂ ತಾಯ್ನಡಿನ ಘನತೆ ಎತ್ತಿಹಿಡಿಯಬೇಕು ಎಂದು ಎಂಆರ್‌ಜಿ ಗ್ರೂಪ್ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ ಹೇಳಿದರು.
ಕಾಪು ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಯ ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ವರ್ಷ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದರು. ಮಣಿಪಾಲ ವಿಶ್ವವಿದ್ಯಾಲಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, 2047ರ ವಿಕಸಿತಾ ಭಾರತದ ಕಲ್ಪನೆ ಜತೆಗೆ ನಾವು ಮುನ್ನಡೆಯಬೇಕಿದೆ. ಇಂದಿನ ಯುವಜನರನ್ನು ಆ ಮಾರ್ಗದಲ್ಲಿ ಬೆಳೆಸಬೇಕಿದೆ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರ್.ಜಿ.ಯು.ಎಚ್.ಎಸ್ ಮಾಜಿ ಉಪಕುಲಪತಿ ಡಾ.ಚಂದ್ರಶೇಖರ ಶೆಟ್ಟಿ, ಎ.ಜೆ. ಮೆಡಿಕಲ್ ಸೈನ್ಸ್‌ನ ಡೀನ್ ಡಾ.ಅಶೋಕ್ ಹೆಗ್ಡೆ, ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ದಿವಾಕರ ಶೆಟ್ಟಿ, ಉದ್ಯಮಿಗಳಾದ ಕೆ.ವಾಸುದೇವ ಶೆಟ್ಟಿ, ಮಹೋಹರ ಎಸ್.ಶೆಟ್ಟಿ, ಎಸ್.ಕೆ.ಜಿ.ಎಸ್.ಎಂ ಟ್ರಸ್ಟ್ ಅಧ್ಯಕ್ಷೆ ಶೋಭಾ ಪಿ.ಶೆಟ್ಟಿ, ಟ್ರಸ್ಟಿಗಳಾದ ಡಾ.ಪನ್ನಾ ಪಿ. ಶೆಟ್ಟಿ, ಡಾ.ಯು.ಮಾಧವ ಶೆಟ್ಟಿ, ಪ್ರಿಶಾ ಪಿ. ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಮಂಜುಳಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಡಾ.ಕೆ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲ ನೀಲಾನಂದ ನಾಯ್ಕ ವರದಿ ವಾಚಿಸಿದರು. ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ಪ್ರಸ್ತಾವನೆಗೈದು ಸ್ಮರಣ ಸಂಚಿಕೆ ಪರಿಚಯಿಸಿದರು. ಉಪನ್ಯಾಸಕಿ ರೋಶಲ್ ಡಿಸೋಜ ವಂದಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಉಷಾ ಮಾಬೆನ್ ಕಾರ್ಯಕ್ರಮ ನಿರೂಪಿಸಿದರು.
ಪ್ರಭಾಕರ ಶೆಟ್ಟಿ ಪುತ್ಥಳಿ ಅನಾವರಣ
ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಮತ್ತು ಡಾ.ಎಚ್.ಎಸ್.ಬಲ್ಲಾಳ್ ಅವರು ಸ್ಥಾಪಕ ದಿ.ಡಾ ಕೆ.ಪ್ರಭಾಕರ ಶೆಟ್ಟಿ ಅವರ ಪುತ್ಥಳಿ ಅನಾವರಣಗೊಳಿಸಿದರು. ಮಸ್ಕತ್ ಮಲ್ಟಿಟೆಕ್ ಗ್ರೂಪ್ ಸ್ಥಾಪಕ ದಿವಾಕರ ಶೆಟ್ಟಿ ಮಲ್ಲಾರು ಸ್ಮರಣ ಸಂಚಿಕೆ ರಜತಪ್ರಭ ಬಿಡುಗಡೆಗೊಳಿಸಿದರು.
ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕೆ ಮತ್ತು ಔದ್ಯೋಗಿಕ ಕ್ಷೇತ್ರದ ಬೆಳವಣಿಗೆಯಲ್ಲಿ ಕಾಪುವಿನ ಕೊಡುಗೆ ಅಪಾರ. ಪುಟ್ಟ ಊರಿನಲ್ಲಿ ದೊಡ್ಡ ವಿದ್ಯಾಸಂಸ್ಥೆ ಸ್ಥಾಪಿಸುವ ಮೂಲಕ ಡಾ. ಪ್ರಭಾಕರ ಶೆಟ್ಟಿ ವಿಶೇಷ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ.
-ಡಾ.ಎಂ.ಶಾಂತಾರಾಮ ಶೆಟ್ಟಿ, ಸಹಕುಲಾಧಿಪತಿ ನಿಟ್ಟೆ ವಿಶ್ವವಿದ್ಯಾಲಯhttps://www.vijayavani.net/talamaddale-by-amrita-bharti-students