

ಕುಂದಾಪುರ: ಬೆಂಗಳೂರಿನ ಕೋರಮಂಗಲದಲ್ಲಿ ಅಖಿಲ ಕರ್ನಾಟಕ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ 15ನೇ ರಾಜ್ಯಮಟ್ಟದ ಸಬ್ ಜೂನಿಯರ್ ಕರಾಟೆ ಚಾಂಪಿಯನ್ಷಿಪ್ 2024ನಲ್ಲಿ ಕುಂದಾಪುರದ ಅರ್ನೊನ್ ಡಿಆಲ್ಮೇಡಾ, 10ರ ವಯೋಮಿತಿಯ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ 10 ವಯೋಮಿತಿ 30-40 ಕೆ.ಜಿ. ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇವರು ಕುಂದಾಪುರ ನಿವಾಸಿ ವಿಲ್ಸನ್ ಮತ್ತು ಜ್ಯೋತಿ ಡಿಆಲ್ಮೇಡಾ ದಂಪತಿ ಪುತ್ರ. ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಸಂದೀಪ್ ವಿ.ಕೆ., ಕೀರ್ತಿ ಜಿ.ಕೆ., ಶಿಹಾನ್ ಶೇಖ್ ಬಸ್ರೂರು ಹಾಗೂ ಶಶಾಂಕ್ ಶೆಣೈ ಟಿ. ತರಬೇತಿ ನೀಡಿದ್ದರು.