ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ಸೈಲೆಂಟ್​ ಸುನೀಲ...

silent sunil
Published on

ಬೆಂಗಳೂರು: ಬಿಜೆಪಿಗೆ ಸೈಲೆಂಟ್​ ಸುನೀಲ ಸೇರುತ್ತಾರಾ ಇಲ್ಲವಾ ಎನ್ನುವ ಪ್ರಶ್ನೆ ಹಲವು ದಿನಗಳಿಂದ ಕಾಡುತ್ತಿತ್ತು. ಇದೀಗ ಬಿಜೆಪಿಗೆ ಸೈಲೆಂಟ್​ ಸುನೀಲ ಅಧಿಕೃತವಾಗಿ ಸೇರ್ಪಡೆಯಾಗಿದ್ದು ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ.

ಈ ಹಿಂದೆ ಸೈಲೆಂಟ್ ಸುನೀಲ ರನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ಬಿಜೆಪಿ ಹೇಳಿತ್ತು. ಆದರೆ ಈಗ ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಪ್ರತಿಪಕ್ಷಗಳಿಗೆ ಆಹಾರವಾಗಿದ್ದಾರೆ ಎನ್ನಲಾಗಿದೆ.

ಸೈಲೆಂಟ್​ ಸುನೀಲ
ಸೈಲೆಂಟ್​ ಸುನೀಲ

ಈ ಹಿಂದೆ ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ರೌಡಿ ಮೋರ್ಚಾ ಎಂದಿತ್ತು. ಸೈಲೆಂಟ್ ಸುನೀಲ ಪಕ್ಷ ಸೇರುವ ವಿಚಾರವಾಗಿ ಸಾರ್ವಜನಿಕವಾಗಿಯೂ ಬಿಜೆಪಿ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಇದರಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೈಲೆಂಟ್ ಸುನಿಲ್​ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಸೈಲೆಂಟ್​ ಸುನೀಲ ಈಗ ಬಿಜೆಪಿಗೆ ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net