

ನವದೆಹಲಿ: ಗುರುನಾನಕ್ ಅವರ 556 ನೇ ಜನ್ಮ ದಿನಾಚರಣೆ ಮಾಡಲು ಪಾಕಿಸ್ತಾನದಲ್ಲಿರುವ ನಂಕಾರ ಸಾಹಿಬ್ಗೆ ಪ್ರಯಾಣಿಸುತ್ತಿದ್ದ 14 ಸಿಖ್ಖರಿಗೆ ಪಾಕ್ಗೆ ಪ್ರವೇಶಿಸಲು ಪಾಕಿಸ್ತಾನ ನಿರಾಕರಣೆ ಮಾಡಿದೆ ಎಂದು ಬುಧವಾರ ವರದಿ ಆಗಿದೆ.
ಗುರುನಾನಕ್ ಅವರ 556 ನೇ ಅಂಗವಾಗಿ ಭಾರತದಿಂದ ಒಟ್ಟು 2,100 ಭಕ್ತರು ಪ್ರಯಾಣ ಮಾಡುತ್ತಿದ್ದರು. ಅಲ್ಲದೇ ಈ ಮುಂಚೆನೆ ಎಲ್ಲಾ 2,100 ಜನಕ್ಕೆ ಪ್ರಾರಂಭದಲ್ಲಿ ಅವಕಾಶ ನೀಡಿದ್ದರು. ಆದರೆ, ಪಾಕ್ ಗಡಿ ದಾಟುವಾಗ 14 ಸಿಖ್ಖರಿಗೆ ನೀವು ಸಿಖ್ಖರು ಅಲ್ಲ.. ಹಿಂದುಗಳು ಎಂದೇಳಿ ವಾಸಪ್ ಕಳುಹಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಯಾತ್ರೆಗೆ ತೆರಳುವ ಈ ಗುಂಪಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಲು ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಸಿಕ್ಕಿತ್ತು. ಪಾಕ್ನಿಂದ ಕೂಡ ಸರಿಸುಮಾರು ಅದೇ ಸಂಖ್ಯೆಯವರಿಗೆ ಪ್ರಯಾಣ ದಾಖಲೆಗಳನ್ನು ನೀಡಿತ್ತು. ಆದರೆ, ಈ 14 ಜನರನ್ನು ಕೊನೆಯ ಹಂತದಲ್ಲಿ ಹಿಂತಿರುಗಿಸಲಾಗಿದೆ.
ಎನ್ಡಿಟಿವಿ ವರದಿ ಪ್ರಕಾರ, ಭಾರತೀಯ ನಾಗರಿಕರಾದ ಎಲ್ಲಾ ಪಾಕಿಸ್ತಾನ ಸಿಂಧಿ ಮೂಲದ ಹಿಂದುಗಳು ಯಾತ್ರೆಯಿಂದ ಹಿಂತಿರುಗಲು ಹೇಳಿದರು. ನೀವು ಹಿಂದುಗಳು ಸಿಖ್ಖರ ಜೊತೆ ಹೋಗಲು ಸಾಧ್ಯವಿಲ್ಲ ಎಂದು ಪಾಕ್ ಹೇಳಿದೆ ಎಂದು ವರದಿಯಾಗಿದೆ.
ಗುರುನಾನಕ್ ಅವರ 556 ನೇ ಜನ್ಮ ದಿನಾಚರಣೆ ಆಚರಣೆ ಮಾಡಲು ಮಂಗಳವಾರ ಅಂದಾಜು 1,900 ಯಾತ್ರಿಕರು ಪಾಕಿಸ್ತಾನವನ್ನು ದಾಟಿದ್ದಾರೆ. ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ನಂತರ ಇದು ಮೊದಲ ನಾಗರಿಕ ವಿನಿಮಯವಾಗಿದೆ.(ಏಜೆನ್ಸೀಸ್)