

ಬೆಂಗಳೂರು: ತಮಿಳು ಚಿತ್ರರಂಗದ ಸ್ಟಾರ್ ನಟ ಸಿದ್ದಾರ್ಥ್ ಅಭಿನಯದ 'ಚಿಕ್ಕು' ಸಿನಿಮಾವನ್ನು ಕರ್ನಾಟಕದಲ್ಲಿ ಪ್ರಚಾರ ಮಾಡಲು ಆಗಮಿಸಿದ್ದ ನಟನಿಗೆ ಕರವೇ ಸ್ವಾಭಿಮಾನಿ ಸೇನೆ ತರಾಟೆಗೆ ತೆಗೆದುಕೊಂಡ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
'ಚಿಕ್ಕು' ಚಿತ್ರದ ಕನ್ನಡ ಆವೃತ್ತಿಯನ್ನು ಪ್ರಚಾರ ಮಾಡುತ್ತಿದ್ದ ಸಿದ್ದಾರ್ಥ್ಗೆ ಕರವೇ ಸ್ವಾಭಿಮಾನಿ ಸೇನೆ ನೇರವಾಗಿ ಪ್ರಶ್ನಿಸಿದ್ದು, ರಾಜ್ಯದಲ್ಲಿ ಕಾವೇರಿ ಕಿಚ್ಚು ಹತ್ತಿಕೊಂಡಿರುವ ಸಮಯದಲ್ಲಿ ಸಿನಿಮಾ ಪ್ರಚಾರ ಅಗತ್ಯವಿದೆಯಾ? ಎಂದು ಕೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಎಸ್ಆರ್ವಿ ಚಿತ್ರಮಂದಿರದಲ್ಲಿ ಸಿದ್ದಾರ್ಥ್ ಭಾಗಿಯಾಗಿದ್ದ ಸುದ್ದಿಗೋಷ್ಠಿಗೆ ಮಧ್ಯೆ ಪ್ರವೇಶಿಸಿದ ನಿಂಗರಾಜು ಗೌಡ ಮತ್ತು ಕರವೇ ಸ್ವಾಭಿಮಾನಿ ಸೇನಾ ತಂಡವು ಭಾರೀ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಕಾವೇರಿ ಗಲಾಟೆ ನಡೆಯುತ್ತಿದೆ. ಈಗ ಇದು ಬೇಕಿತ್ತಾ? ಇದು ಸಂಘರ್ಷಕ್ಕೆ ದಾರಿ ಮಾಡಿಕೊಡುವುದಿಲ್ಲವೇ? ಎಂದು ಹೇಳಿದ್ದೇ ತಡ ನಟ ಸಿದ್ದಾರ್ಥ್ ಸ್ಥಳದಿಂದ ಹೊರನಡೆದಿದ್ದಾರೆ.