ದೀಪಿಕಾ ಜೊತೆ ಅಂಥ ಸೀನ್​ಗಳಲ್ಲಿ ನಟಿಸುವಾಗ ಭಯವಾಯ್ತು: ಸಿದ್ಧಾಂತ್ ಹೀಗೆನ್ನಲು ಕಾರಣವಿದೆ ನೋಡಿ..

padukone
Published on

ಮುಂಬೈ: 'ಗೆಹ್ರಾಯನ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 2022 ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗಿ ಉತ್ತಮ ಮೆಚ್ಚುಗೆಯನ್ನು ಪಡೆಯಿತು. ನಟ ಸಿದ್ಧಾಂತ್ ದೀಪಿಕಾ ಪಡುಕೋಣೆ ಜೊತೆ ಹಾಟ್​ ಸೀನ್​ಗಳಲ್ಲಿ ನಟಿಸಿದ್ದಾಗ ಏನಾಯ್ತು ಎಂಬುದರ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ.

ಹಸಿಬಿಸಿ ದೃಶ್ಯಗಳನ್ನು ಚಿತ್ರೀಕರಿಸುವಾಗ ನಾನು ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಿದ್ದೆ. ಭಯವೂ ಆಗಿತ್ತು. ನಿರ್ಮಾಪಕ ಕರಣ್ ಜೋಹರ್ ಮತ್ತು ನನ್ನ ತಂದೆ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು. ಆ ದಿನ ನನ್ನ ತಂದೆಯ ಮಾತುಗಳು ನನಗೆ ನೆನಪಿಗೆ ಬಂದವು. ಶ್ರೇಷ್ಠ ನಿರ್ದೇಶಕ, ಹೆಸರಾಂತ ನಿರ್ಮಾಣ ಸಂಸ್ಥೆ, ಸ್ಟಾರ್ ಕಾಸ್ಟ್ ಅಂತಹ ಅವಕಾಶಕ್ಕಾಗಿ ದೇಶದ ಅನೇಕ ಯುವ ನಟರು ಕಾಯುತ್ತಿರುತ್ತಾರೆ. ಇದು ನಿನ್ನ ವೃತ್ತಿಜೀವನದ ಒಂದು ಭಾಗವಾಗಿದೆ. ಹೀಗಾಗಿ ನಟನೆಯಷ್ಟೇ ಮುಖ್ಯ ಎಂದಿದ್ದರು. ಆ ಮಾತುಗಳು ನೆನಪಾಬಿ ಅಭಿನಯಿಸಿದೆ ಎಂದಿದ್ದಾರೆ.

ರಣವೀರ್‌ಸಿಂಗ್ ಅವರೊಂದಿಗಿನ ವಿವಾಹದ ನಂತರ,ದೀಪಿಕಾಗೆ ಪೂರ್ಣ ಪ್ರಮಾಣದ ಪ್ರಣಯ ಕಥೆಯ ಚಿತ್ರ 'ಗೆಹ್ರಿಯನ್'. ಮದುವೆಯ ನಂತರ ಇಂತಹ ಚಿತ್ರದಲ್ಲಿ, ಅದೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದಕ್ಕಾಗಿ ದೀಪಿಕಾ ಟೀಕೆಗಳನ್ನು ಎದುರಿಸಿದ್ದರು.

https://www.vijayavani.net/actress-urvashi-rautela-reacts-to-her-leaked-bathroom-video-that-went-viral #vijayavani

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net