ಕಾಲುವೆಗೆ ಬಿದ್ದಿದ್ದ ಕಾರು, ಒಂದು ದಿನದ ಬಳಿಕ ಪತ್ತೆ! ಬಾಗಿಲು ತೆರೆದವರಿಗೆ ಕಾದಿತ್ತು ಶಾಕ್​

death car
Published on

ಸಿದ್ದಾಪುರ(ಉತ್ತರ ಕನ್ನಡ): ಜಲಪಾತ ಕಣ್ತುಂಬಿಕೊಂಡ ಖುಷಿಯಲ್ಲಿ ಮನೆಗೆ ವಾಪಸ್​ ಬರುತ್ತಿದ್ದ ಮೂವರು ಮಾರ್ಗಮಧ್ಯೆ ಜಲಸಮಾಧಿಯಾದ ಘಟನೆ ಹೆಗ್ಗರಣಿ ಗ್ರಾಪಂ ವ್ಯಾಪ್ತಿಯ ಕೋಡನಮನೆ ಸಮೀಪ ಸಂಭವಿಸಿದೆ.

ಬುಧವಾರ ಮಧ್ಯಾಹ್ನ ಭಾರಿ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಶಿರಸಿ - ಸಿದ್ದಾಪುರ ನಡುವೆಯ ಕೊಡನಮನೆ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಕೋಡನಮನೆ ಸೇತುವೆಯಿಂದ ಸುಮಾರು 300 ಮೀಟರ್ ಆಚೆ ಕಾರು ನೀರಿನೊಳಗೆ ಮುಳುಗಿರುವುದನ್ನು ಗುರುವಾರ ಮಧ್ಯಾಹ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಕಾಲುವೆಗೆ ಬಿದ್ದ ಒಂದು ದಿನದ ಬಳಿಕ ಪತ್ತೆಯಾದ ಕಾರಿನ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿದ್ದ ಹೆಣಗಳನ್ನು ಸ್ಥಳೀಯರು ಕಂಡು ಬೆಚ್ಚಿಬಿದ್ದಿದ್ದಾರೆ. ಕಾರಿನಲ್ಲಿ ಐವರು ಇದ್ದರೆಂದು ತಿಳಿದು ಬಂದಿದ್ದು, ರಾಯನಾಳ ನಿವಾಸಿ ನಿಶ್ಕಿಲ್ ಹಿರೇಮಠ (22), ಶಾಂತಿನಗರ ಚಚ್೯ ಬಳಿಯ ನಿವಾಸಿ ರೋನ್ವಿತ್ ಶೋಭಿತ (20), ಹೊಸೂರಿನ ಸುಷ್ಮಾ ಸಾಗರ (19) ಮೃತದೇಹ ಪತ್ತೆಯಾಗಿದೆ.

ಬೆಂಗಳೂರು ನಿವಾಸಿ ಅಕ್ಷತಾ ಹಿರೇಮಠ (22) ದೇಹ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸಿದ್ದಾಪುರ ಪೊಲೀಸರು ಅಕ್ಷತಾ ದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಹಳ್ಳಕ್ಕೆ ಬಿದ್ದದ್ದು ಧಾರವಾಡ ನೋಂದಣಿ ಸಂಖ್ಯೆಯ (ಕೆಎ 63 ಎಂ 2651) ಸ್ವಿಫ್ಟ್ ಕಾರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net