ಅನಾರೋಗ್ಯ ಪೀಡಿತ ವ್ಯಕ್ತಿ ಆಸ್ಪತ್ರೆಗೆ..

PTR_12 APR_2
Published on

ಪುತ್ತೂರು: ಚುನಾವಣೆ ಜರೂರಿನಲ್ಲೂ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ತಮ್ಮ ಕಛೇರಿಯ ಸಮೀಪದಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರು ಆಹಾರ ನೀರು ಇಲ್ಲದೆ ಇರುವ ವಿಚಾರ ತಿಳಿದು ತಕ್ಷಣ ಆಸ್ಪತ್ರೆಗೆ ಸೇರಿಸುವ ಕಾರ್ಯ ಮಾಡಿದ್ದಾರೆ.

ವ್ಯಕ್ತಿ ಕನ್ನಡವನ್ನು ಮಾತನಾಡುತ್ತಿದ್ದು, ಯಾರು ಎಲ್ಲಿಂದ ಬಂದಿರುವುದು ಎಂದು ಹೇಳಲಾಗದ ಸ್ಥಿತಿಯಲ್ಲಿದ್ದರು. ತುಳು ಬರ ಹಿನ್ನಲೆಯಾಲ್ಲಿ ಸ್ಥಳೀಯ ವ್ಯಕ್ತಿಯಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಎಲ್ಲಿದ್ದೇನೆಂಬ ಅರಿವು ಹಾಗೂ ಎಲ್ಲಿಯವ ಎನ್ನುವ ಸ್ಮರಣೆ ಇಲ್ಲದ ಕಾರಣದಿಂದ ತಕ್ಷಣ ಆಸ್ಪತ್ರೆಗೆ ಸೇರಿಸಿ ಆರೋಗ್ಯ ಚೇತರಿಸಿಕೊಳ್ಳುವಂತೆ ನೋಡಿಕೊಂಡಿದ್ದಾರೆ. ಸಾಂತ್ವನ ಕೇಂದ್ರಕ್ಕೆ ವರ್ಗಾವಣೆ ಮಾಡಿದ ಬಳಿಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಪ್ರಯತ್ನ ಮಾಡುವ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ.

ತಹಶೀಲ್ದಾರ್ ಕುಂಞ ಅಹಮ್ಮದ್, ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net