

ವಿಜಯವಾಣಿ ಸುದ್ದಿಜಾಲ ಉಡುಪಿ
ನಾಡೋಜ ಡಾಕ್ಟರ್ ಜಿ.ಶಂಕರ ಅವರ 70ನೇ ಜನ್ಮದಿನದ ನಿಮಿತ್ತ ಉಡುಪಿ ಕಿದಿಯೂರಿನ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ (ಅ.3) ಶ್ರೀ ಸುಮುಖನ ಭಕ್ತ ದೃಶ್ಯ-ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಡಾ. ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಎಸ್.ಕೆ. ಆನಂದ ಧ್ವನಿ ಸುರುಳಿ ಬಿಡುಗಡೆ ಮಾಡಿದರು.
ಲಲಿತಾ ಅವರು ಸಾಹಿತ್ಯ ರಚಿಸಿದ್ದಾರೆ. ರವಿ ಕಾರಂತ ಬಿ. ಕೋಟ ಅವರು ಗಾಯನ, ಸಂಗೀತ ಸಂಯೋಜನೆ ಮತ್ತು ದ್ವನಿ ಮುದ್ರಣ ಮಾಡಿದ್ದಾರೆ. ಸಹ ಗಾಯನದಲ್ಲಿ ಪ್ರಸನ್ನ ಭಟ್ ಯಲ್ಲಾಪುರ, ಬಾಲಕೃಷ್ಣ ಕೊಡವೂರು, ನಿಹಾರಿಕಾ ಮಲ್ಪೆ ಧ್ವನಿ ನೀಡಿದ್ದಾರೆ. ನಾಗೇಂದ್ರ ಭಟ್ ಯಲ್ಲಾಪುರ ದೃಶ್ಯ ಸಂಕಲನದಲ್ಲಿ ಕೈಜೋಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಂಕರ ಸಾಲ್ಯಾನ್, ಜಗದೀಶ ಕೋಟ್ಯಾನ್, ರಾಮಕೃಷ್ಣ ಭಟ್, ಭೋಜರಾಜ ಕಿದಿಯೂರು, ಸ್ಟಾನ್ಸಿ, ಪ್ರೊ. ರಾಜಮೋಹನ, ಪ್ರೊ. ನಾಗರಾಜ ವೈದ್ಯ, ಅಶೋಕ ಮಲ್ಪೆ, ಮಂಗಲಾ ಭಟ್ ಇತರರು ಉಪಸ್ಥಿತರಿದ್ದರು.
ಗೀತಮ್ ವಾದ್ಯಮ್ ಸಂಸ್ಥೆಯ ಸಂಚಾಲಕ ಪ್ರಸನ್ನ ಭಟ್ ಕಾರ್ಯಕ್ರಮ ನಿರ್ವಹಿಸಿದರು.