ವೈಚಾರಿಕತೆ ಹೆಸರಲ್ಲಿ ಧರ್ಮ-ಸಂಸ್ಕೃತಿ ನಾಶಗೊಳ್ಳಬಾರದು: ಶ್ರೀರಂಭಾಪುರಿ ಜಗದ್ಗುರುಗಳ ಕಳಕಳಿ

ಬೆಂಗಳೂರು: ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ವೈಚಾರಿಕತೆ ಮತ್ತು ಸುಧಾರಣೆಯ ಹೆಸರಿನಲ್ಲಿ ಆಧ್ಯಾತ್ಮ ಸಂಸ್ಕೃತಿ ನಾಶಗೊಳ್ಳಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಸಂಯೋಜಿಸಿದ ಧರ್ಮೋತ್ತೇಜಕ ಸಂಗಮ ಸಮಾವೇಶದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾನವನನ್ನು ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ಗುರುವಿನ ಧರ್ಮವಾಗಿದೆ. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳನ್ನು ಬೋಧಿಸುವುದರ ಮೂಲಕ ಸಾಮರಸ್ಯ ಸೌಹಾರ್ದತೆ ಬೆಳೆಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಗುರುವಿಲ್ಲದೇ ಅರಿವು ಆದರ್ಶಗಳು ತೋರವು. ವೀರಶೈವ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಶಿವ ಪಥವನರಿಯಲು ಗುರುವೇ ಕಾರಣೀಭೂತನಾಗಿದ್ದಾನೆ. ಧಾರ್ಮಿಕ ತತ್ವ ಸಿದ್ಧಾಂತಗಳ ಪರಿಪಾಲನೆಯಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಪ್ರಾಪ್ತವಾಗುವುದು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಧರ್ಮಸಂಸ್ಕೃತಿಯನ್ನು ಚಾಚುತಪ್ಪದೇ ಪಾಲಿಸಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯನಲ್ಲಿ ಆಶೆಗಳು ಹೆಚ್ಚಾಗಿವೆ. ಆದರೆ ಆದರ್ಶ ಚಿಂತನೆಗಳ ಕೊರತೆಯಿದೆ. ಹೀಗಾಗಿ ಜೀವನದಲ್ಲಿ ಶಾಂತಿ ಸಮಾಧಾನವಿಲ್ಲ. ಆರೋಗ್ಯಪೂರ್ಣ ಸಮಾಜಕ್ಕೆ ಇಂಥ ಸಮಾರಂಭಗಳ ಅವಶ್ಯಕತೆ ಇದೆ ಎಂದರು.

ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿ, ಬದುಕಿನಲ್ಲಿ ಶಾಂತಿ ನೆಮ್ಮದಿಗಿಂತ ಮಿಗಿಲಾದ ಸಂಪತ್ತಿಲ್ಲ. ಧರ್ಮದ ಪಾಲನೆಯಿಂದ ಇವು ದೊರಕುತ್ತವೆ ಹೊರತು ಹಣದಿಂದಲ್ಲ. ಶ್ರೀ ರಂಭಾಪುರಿ ಪೀಠದ ಆದರ್ಶ ಚಿಂತನೆಗಳು ಭಕ್ತ ಸಂಕುಲದ ಉನ್ನತಿಗೆ ಸ್ಫೂರ್ತಿಯಾಗಿವೆ ಎಂದರು.

ಡಾ. ಮಮತಾ ಸಾಲಿಮಠ ಅವರು ಸಿದ್ಧಾಂತ ಶಿಖಾಮಣಿಯಲ್ಲಿ ಗುರು ಹಿರಿಮೆ ವಿಷಯವಾಗಿ ಉಪನ್ಯಾಸ ನೀಡಿದರು. ನಿವೃತ್ತ ಐಪಿಎಸ್ ಅಧಿಕಾರಿ ರೇವಣಸಿದ್ಧಯ್ಯ, ನ್ಯಾಯವಾದಿ ಚಂದ್ರಮೌಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಬೀರೂರು ಶಿವಸ್ವಾಮಿ, ಮಾದಯ್ಯ, ಉಮಾಶಂಕರ, ಚಂದ್ರಶೇಖರ ನಾಗರಾಳಮಠ, ಸಂಗಯ್ಯ ಹಿರೇಮಠ, ಆರ್.ಆರ್.ಹಿರೇಮಠ, ಲತಾ ಜಿಗಳೂರು, ಪಂಚಾಕ್ಷರಿ ಹಿರೇಮಠ, ಪಿ.ಎಸ್.ವಿಶ್ವನಾಥ, ನ್ಯಾಯವಾದಿ ಬಿ.ಪಿ.ಪುಟ್ಟಸಿದ್ಧಯ್ಯ ಮತ್ತಿತರರು ಉಪಸ್ಥಿತರಿದ್ದರು. ವೇ.ಶಿವಶಂಕರ ಶಾಸ್ತ್ರಿ ಮತ್ತು ಗಾನಸುಧೆ ತಂಡದವರು ಭಕ್ತಿಗಾಯನ ನಡೆಸಿಕೊಟ್ಟರು. ಬೆಳಿಗ್ಗೆ ಲೋಕ ಕಲ್ಯಾಣ, ವಿಶ್ವ ಶಾಂತಿಗಾಗಿ ಶ್ರೀರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು.

ವೈಚಾರಿಕತೆ ಹೆಸರಲ್ಲಿ ಧರ್ಮ-ಸಂಸ್ಕೃತಿ ನಾಶಗೊಳ್ಳಬಾರದು: ಶ್ರೀರಂಭಾಪುರಿ ಜಗದ್ಗುರುಗಳ ಕಳಕಳಿ

ನಿರ್ಮೋಹ ಮಾತೃವಾತ್ಸಲ್ಯವೇ ಗುರು ಸಾನ್ನಿಧ್ಯ

ವೈಚಾರಿಕತೆ ಹೆಸರಲ್ಲಿ ಧರ್ಮ-ಸಂಸ್ಕೃತಿ ನಾಶಗೊಳ್ಳಬಾರದು: ಶ್ರೀರಂಭಾಪುರಿ ಜಗದ್ಗುರುಗಳ ಕಳಕಳಿವ್ಯಕ್ತಿಯ ಬದುಕಿಗೆ ಹೆತ್ತವರು, ಮತ್ತು ಗುರುಗಳ ಆಶೀರ್ವಾದ ಅವಶ್ಯವಾಗಿದ್ದು, ಹೆತ್ತವರು ಮುಕ್ತಿಗೆ ಪಿತೃ ತರ್ಪಣದ ಮೋಹವನ್ನಾದರೂ ಬಯಸಿ ಮಕ್ಕಳನ್ನು ಪ್ರೀತಿಸುತ್ತಾರೆ. ಆದರೆ ಗುರುಗಳ ವಾತ್ಸಲ್ಯ ನಿರ್ಮೋಹವಾಗಿರುತ್ತದೆ ಎಂದು ಗೌರಿಗದ್ದೆಯ ಅವಧೂತ ಆಶ್ರಮದ ವಿನಯ ಗುರೂಜಿ ಹೇಳಿದರು. ಶಿವನ ಪಂಚಮುಖಗಳ ಸಾಕ್ಷಿಯಾಗಿರುವ ಪಂಚಪೀಠಗಳು ಆಧ್ಯಾತ್ಮಿಕ ಪರಂಪರೆಯ ಮುಕುಟುಗಳಾಗಿವೆ ಎಂದು ಬಣ್ಣಿಸಿದರು.

Share This Article

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…

ತೂಕ ಇಳಿಕೆಗೆ ನಂಬರ್​ 1 ಹಣ್ಣು! ಇದನ್ನು ತಿಂದರೆ ಸಾಕು ಬೆಣ್ಣೆಯಂತೆ ಕರಗಿ ಹೋಗುತ್ತದೆ ಬೊಜ್ಜು

ಎಷ್ಟೇ ಪ್ರಯತ್ನಪಟ್ಟರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಒಂದು ಹಣ್ಣನ್ನು ತಿಂದರೆ…

ನಿಮ್ಮ ಅಂಗೈನಲ್ಲಿ ಈ ರೀತಿ ತ್ರಿಕೋನ ಚಿಹ್ನೆ ಇದೆಯಾ? ಇದ್ರೆ ಏನಾಗುತ್ತೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…