

ಉಪ್ಪಿನಂಗಡಿ: ಮೂವತ್ತನಾಲ್ಕನೇ ನೆಕ್ಕಿಲಾಡಿಯಲ್ಲಿರುವ ಶ್ರೀ ಗುರುರಾಘವೇಂದ್ರ ಮಠದಲ್ಲಿ ಮೂರು ದಿನಗಳ ಕಾಲ ನಡೆದ ಆರಾಧನಾ ಮಹೋತ್ಸವ ಗುರುವಾರ ರಾತ್ರಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಆ.20ರಂದು ಪೂರ್ವಾರಾಧನೆ, 21ರಂದು ಮಧ್ಯಾರಾಧನೆ ಜರುಗಿದರೆ, 22ರಂದು ಉತ್ತರಾರಾಧನೆ ವಿಧಿ-ವಿಧಾನದಂತೆ ನಡೆಯಿತು. ಮಧ್ಯಾಹ್ನದ ಅನ್ನಸಂತರ್ಪಣೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದರು.
ಇಷ್ಟಾರ್ಥ ಸಿದ್ಧಿಕೇತ್ರವಾಗಿ ಗಮನ ಸೆಳೆದಿರುವ ಶ್ರೀಮಠಕ್ಕೆ, ಜಿಲ್ಲೆ ಹಾಗೂ ಹೊರ ಜಿಲ್ಲೆಯ ಭಕ್ತರು ಆಗಮಿಸಿ ಶ್ರೀ ಗುರು ರಾಯರ ಸೇವಾ ಕೈಂಕರ್ಯಗಳಲ್ಲಿ ಭಾಗಿಯಾದರು. ಮಠದ ಅಧ್ಯಕ್ಷ ಉದಯಕುಮಾರ್ ಕೆ, ಪ್ರಧಾನ ಕಾರ್ಯದರ್ಶಿ ಎನ್.ಗೋಪಾಲ ಹೆಗ್ಡೆ, ಗೌರವಾಧ್ಯಕ್ಷ ಹರೀಶ ಉಪಾಧ್ಯಾಯ, ಪ್ರಮುಖರಾದ ಜಯಪ್ರಕಾಶ ಶೆಟ್ಟಿ, ಹರೀಶ ಭಂಡಾರಿ, ಸ್ವರ್ಣೇಶ್, ಶಶಿಧರ್ ಗೌಡ ಅಂಬೆಲ, ದಮಯಂತಿ ಆರ್.ಶೆಟ್ಟಿ, ಸಂಜೀವ ಮಠಂದೂರು, ಕಾಮಾಕ್ಷಿ ಹೆಗ್ಡೆ, ಶ್ರೀನಿಧಿ ಉಪಾಧ್ಯಾಯ, ಧನ್ಯಕುಮಾರ್ ರೈ, ಉಮೇಶ ಶೆಣೈ, ಪ್ರಶಾಂತ್ ನೆಕ್ಕಿಲಾಡಿ, ಕೈಲಾರ್ ರಾಜಗೋಪಾಲ ಭಟ್, ಕರಾಯ ರಾಘವೇಂದ್ರ ನಾಯಕ್, ಡಾ.ನಿರಂಜನ್ ರೈ, ಕೆ.ರಾಧಾಕೃಷ್ಣ ನಾಯಕ್, ಕಂಗ್ವೆ ವಿಶ್ವನಾಥ ಶೆಟ್ಟಿ, ಚಂದಪ್ಪ ಮೂಲ್ಯ, ರಾಮಚಂದ್ರ ಮಣಿಯಾಣಿ, ಯು.ರಾಜೇಶ್ ಪೈ, ವೆಂಕಪ್ಪ ಗೌಡ, ಶರತ್ ಕೋಟೆ, ಡಾ.ಸುಪ್ರಿತಾ ಎನ್.ರೈ, ವಿದ್ಯಾಧರ ಜೈನ್, ಕೀರ್ತನ್ ಕುಮಾರ್, ಬಿಪಿನ್, ಸದಾನಂದ, ವಸುಧಾ ಉಪಾಧ್ಯಾಯ, ಪ್ರಶಾಂತ್ ಶಿವಾಜಿನಗರ ಮತ್ತಿತರರು ಉಪಸ್ಥಿತರಿದ್ದರು.