More

    ಶ್ರೀ ಮಹಾಸತಿ ಅಮ್ಮನವರ ಜಾತ್ರೆ 23ರಿಂದ

    ಭಟ್ಕಳ: ತಾಲೂಕಿನ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜ. 23ರಿಂದ ಜ.31ರವರೆಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ.

    ಪೂಜಾ-ಸಾಮಗ್ರಿಗಳಾದ ಹಣ್ಣು ಕಾಯಿ, ಸೀರೆ-ಕುಪ್ಪಸ, ಉಡಿ ಸಾಮಾನು, ತುಲಾಭಾರ ಸೇವೆ ಸಾಮಗ್ರಿ, ಬಳೆ, ಇತ್ಯಾದಿ ಹರಕೆ ಸಾಮಗ್ರಿಗಳ ಅಂಗಡಿ, ಗೊಂಬೆ ಅಂಗಡಿಗಳನ್ನು ತಾತ್ಕಾಲಿಕವಾಗಿ 9 ದಿನಗಳ ಕಾಲ ಬರುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೆರೆಯಲಾಗುವುದು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಅಂಗಡಿ-ಮಳಿಗೆಗಳನ್ನು ಪಾರದರ್ಶಕತೆಯಿಂದ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಜನವರಿ 9ರಂದು ಬೆಳಗ್ಗೆ 10 ಗಂಟೆಗೆ ನಡೆಸಲಾಗುವುದು ಎಂದು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts